alex Certify ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಅಚರಿಚಿತರಿಂದ ಡ್ರೋನ್ ಹಾರಾಟ: ಪೊಲೀಸರಿಂದ ಶೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಅಚರಿಚಿತರಿಂದ ಡ್ರೋನ್ ಹಾರಾಟ: ಪೊಲೀಸರಿಂದ ಶೋಧ

ಬೆಂಗಳೂರು: ಬೆಂಗಳೂರಿನ ಪ್ಯಾರಾ ಮಿಲಿಟರಿ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿದೆ. ಕಾಂಪೌಂಡ್ ಒಳಗೆ ಪ್ರವೇಶಿಸಿದ ಡ್ರೋನ್ ಪ್ರವೇಶಿಸಿ ಹಾರಾಟ ನಡೆಸಿದ್ದು, ಸೇನಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ಜೆಸಿ ನಗರದ ಚಿನ್ನಪ್ಪ ಗಾರ್ಡನ್ ನಲ್ಲಿರುವ ಪ್ಯಾರಾ ಮಿಲಿಟರಿ ರೆಜಿಮೆಂಟ್ ಮೇಲೆ ಡ್ರೋನ್ ಹಾರಾಟ ನಡೆಸಿದ್ದು, ಅಪರಿಚಿತರ ವಿರುದ್ಧ ಸೇನಾಧಿಕಾರಿಗಳು ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನವೆಂಬರ್ 9 ರಂದು ಸಂಜೆ 6:30 ರಿಂದ 7 ಗಂಟೆ ಅವಧಿಯಲ್ಲಿ ಡ್ರೋನ್ ಹಾರಾಡಿದೆ. ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಸೇನಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಿರ್ಬಂಧಿತ ಮಿಲಿಟರಿ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡ್ರೋನ್ ಹಾರಾಟ ನಡೆಸಿದವರಿಗಾಗಿ ಶೋಧ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...