alex Certify ವಾಹನ ಸವಾರರಿಗೆ ಭರ್ಜರಿ ಖುಷಿ ಸುದ್ದಿ: ಬದಲಾಗಿದೆ ಚಾಲನಾ ಪರವಾನಗಿ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಭರ್ಜರಿ ಖುಷಿ ಸುದ್ದಿ: ಬದಲಾಗಿದೆ ಚಾಲನಾ ಪರವಾನಗಿ ನಿಯಮ

ಚಾಲನಾ ಪರವಾನಗಿ ಪಡೆಯುವುದು ದೊಡ್ಡ ಸವಾಲಿನ ಕೆಲಸಗಳಲ್ಲಿ ಒಂದು. ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಂತು,ಪರೀಕ್ಷೆ ಪಾಸ್ ಆಗೋದು ಸುಲಭವಲ್ಲ. ಆದ್ರೆ ಇನ್ಮುಂದೆ ಈ ಕಷ್ಟವಿಲ್ಲ. ಕೇಂದ್ರ ಸರ್ಕಾರ, ಚಾಲನಾ ಪರವಾನಗಿ ಪಡೆಯುವುದನ್ನು ಸುಲಭಗೊಳಿಸಿದೆ.

ಕೇಂದ್ರ ಸರ್ಕಾರ ಚಾಲನಾ ಪರವಾನಗಿ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಬದಲಾವಣೆ ಪ್ರಕಾರ, ಚಾಲನಾ ಪರವಾನಗಿ ಪಡೆಯಲು ಆರ್ ಟಿ ಒ ಕಚೇರಿಗೆ ಹೋಗಬೇಕಾಗಿಲ್ಲ. ಅಲ್ಲಿ ಡ್ರೈವಿಂಗ್ ಪರೀಕ್ಷೆಯನ್ನು ನೀಡುವ ಅಗತ್ಯವಿಲ್ಲ.

ಸಾರಿಗೆ ಸಚಿವಾಲಯ ನೀಡಿದ  ಮಾಹಿತಿಯ ಪ್ರಕಾರ, ಈಗ ನೀವು ಮಾನ್ಯತೆ ಪಡೆದ ಡ್ರೈವಿಂಗ್ ತರಬೇತಿ ಶಾಲೆಯಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಇದಕ್ಕಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತ್ರ ಡ್ರೈವಿಂಗ್ ಟ್ರೈನಿಂಗ್ ಸ್ಕೂಲ್‌ನಿಂದ ತರಬೇತಿ ತೆಗೆದುಕೊಳ್ಳಬೇಕು. ಅಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅರ್ಜಿದಾರರಿಗೆ ಶಾಲೆಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ, ಅರ್ಜಿದಾರರ ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ.

ಆದ್ರೆ ಇದಕ್ಕೂ ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳಿಗೆ ಕನಿಷ್ಠ ಒಂದು ಎಕರೆ ಭೂಮಿ ಇದೆ ಎಂದು ಅಧಿಕೃತ ಸಂಸ್ಥೆ ಖಚಿತಪಡಿಸಿಕೊಳ್ಳಬೇಕು. ಮಧ್ಯಮ ಮತ್ತು ಭಾರೀ ಪ್ರಯಾಣಿಕ ಸರಕು ವಾಹನಗಳು ಅಥವಾ ಟ್ರೇಲರ್‌ಗಳ ಕೇಂದ್ರಗಳಿಗೆ ಎರಡು ಎಕರೆ ಅಗತ್ಯವಿದೆ. ತರಬೇತುದಾರರು ಕನಿಷ್ಠ 12 ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಠ ಐದು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಸಂಚಾರ ನಿಯಮಗಳನ್ನು ಚೆನ್ನಾಗಿ ತಿಳಿದಿರಬೇಕು. ಲಘು ಮೋಟಾರು ವಾಹನಗಳನ್ನು ಚಾಲನೆ ಮಾಡಲು, ಕೋರ್ಸ್‌ನ ಅವಧಿಯು ಗರಿಷ್ಠ 4 ವಾರಗಳು 29 ಗಂಟೆಗಳವರೆಗೆ ಇರುತ್ತದೆ. ಈ ಚಾಲನಾ ಕೇಂದ್ರಗಳ ಪಠ್ಯಕ್ರಮವನ್ನು 2 ಭಾಗಗಳಾಗಿ ವಿಂಗಡಿಸಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...