alex Certify ಕಾರು ತಡೆದು ನಿಲ್ಲಿಸಿದ ಪೊಲೀಸ್​ನನ್ನೇ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ತಡೆದು ನಿಲ್ಲಿಸಿದ ಪೊಲೀಸ್​ನನ್ನೇ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ: ವಿಡಿಯೋ ವೈರಲ್

Video grab of the incident that went viral on social media. Credit: Twitter / @AHindi Newsಟ್ರಾಫಿಕ್ ಉಲ್ಲಂಘನೆಯ ದಂಡವನ್ನು ತಪ್ಪಿಸುವ ಸಲುವಾಗಿ ವಾಹನ ಚಾಲಕನೊಬ್ಬ ಪೊಲೀಸರ ಮೇಲೆ ಗಾಡಿ ಓಡಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟ್ರಾಫಿಕ್ ಪೊಲೀಸ್ ಬಾನೆಟ್‌ಗೆ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಸಂಚಾರ ನಿಯಮ ಉಲ್ಲಂಘನೆಗಾಗಿ ಟ್ರಾಫಿಕ್ ಪೊಲೀಸರು ಕಾರನ್ನು ನಿಲ್ಲಿಸಿದ್ದರು. ಆದರೆ ಕಾರಿನ ಚಾಲಕ ಪೊಲೀಸರನ್ನು ಓಡಿಸಲು ಯತ್ನಿಸಿದ್ದಾನೆ. ಪೊಲೀಸ್​ ಮೇಲೆ ಕಾರು ಹರಿಸಿದಾಗ ಕಾರಿನ ಬಾನೆಟ್​ ಮೇಲೆ ಪೊಲೀಸ್​ ನೇತಾಡುತ್ತಿದ್ದು, ಸುಮಾರು 4 ಕಿಲೋಮೀಟರ್ ದೂರ ಹೋಗಿರುವ ಘಟನೆ ನಡೆದಿದೆ. ನಂತರ, ಪೊಲೀಸರು ಕಾರು ಚಾಲಕನಿಂದ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಳಿ ಬಣ್ಣದ ಕಾರು ಪೊಲೀಸರನ್ನು ಎಳೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

“ಫೋನ್‌ನಲ್ಲಿ ಮಾತನಾಡುತ್ತಾ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ನಾನು ನಿಲ್ಲಿಸಿದೆ. ನಾನು ಚಲನ್ ಪಾವತಿಸುವಂತೆ ಕೇಳಿದೆ. ಆದರೆ ಅವನು ಪಾವತಿಸಲು ನಿರಾಕರಿಸಿದನು ಮತ್ತು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು” ಎಂದು ಟ್ರಾಫಿಕ್ ಪೊಲೀಸ್ ಶಿವಸಿಂಗ್ ಚೌಹಾಣ್ ಹೇಳಿದ್ದಾರೆ. ಆರೋಪಿಯನ್ನು ಗ್ವಾಲಿಯರ್ ನಗರದ ನಿವಾಸಿ ಕೇಶವ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.

— ANI_HindiNews (@AHindinews) December 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...