alex Certify ಸ್ನಾಯು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತೆ ಅಧಿಕ ಕೆಫೀನ್ ಸೇವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾಯು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತೆ ಅಧಿಕ ಕೆಫೀನ್ ಸೇವನೆ

ನಿರಂತರವಾಗಿ ಕೆಫೀನ್ ಅಂಶದ ಸೇವನೆಯಿಂದ ನಿಮ್ಮ ಮೆದುಳಿನಲ್ಲಿರುವ ಗ್ರೇ ಪದಾರ್ಥ ತಗ್ಗಿ, ನಮ್ಮ ಪ್ರತಿನಿತ್ಯದ ಕೆಲಸಕ್ಕೆ ಅಗತ್ಯವಾದ ಸ್ನಾಯು ನಿಯಂತ್ರಣ, ಇಂದ್ರೀಯ ಕಾರ್ಯ, ಭಾವನೆಗಳು, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ಕುಗ್ಗಿಸಲಿದೆ ಎಂದು ಬಸೆಲ್ ವಿವಿಯ ಸಂಶೋಧಕರ ತಂಡವೊಂದು ತಿಳಿಸಿದೆ.

ಸೆರೆಬ್ರಲ್ ಕಾಟೆರ್ಕ್ಸ್ ನಿಯತಕಾಲಿಕೆಯ ಜೂನ್ ಅವತರಣಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ಕೆಫೀನ್‌ ಸೇವನೆಯಿಂದ ವ್ಯಕ್ತಿಯ ಮೆದುಳಿಗೆ ಯಾವ ಮಟ್ಟಿಗೆ ಪರಿಣಾಮ ಆಗಲಿದೆಯೆಂದರೆ ಅದು ಹತ್ತೇ ದಿನಗಳಲ್ಲಿ ಅರಿವಿಗೆ ಬರಲಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ.

ಆದರೂ, “ನಮ್ಮ ಈ ಫಲಿತಾಂಶಗಳೇನೂ, ಕೆಫೀನ್ ಸೇವನೆಯಿಂದ ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಆಗಲಿದೆ ಎಂದು ಹೇಳುವುದಿಲ್ಲ” ಎಂದು ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಕರೋಲಿನ್ ರಿಯ್ಚರ್ಟ್ ಹೇಳುತ್ತಾರೆ.

ಅಧ್ಯಯನದಲ್ಲಿ ಆರೋಗ್ಯವಂತ 20 ಯುವಕರು ಭಾಗಿಯಾಗಿದ್ದರು. ಅವರಲ್ಲಿ 10 ಮಂದಿಗೆ ಕೆಫೀನ್ ಟ್ಯಾಬ್ಲೆಟ್‌ಗಳನ್ನು ಕೊಡಲಾಗಿದ್ದು, ಮಿಕ್ಕ 10 ಮಂದಿಗೆ ಪ್ಲಾಸೆಬೋ ಮಾತ್ರೆಗಳನ್ನು ಕೊಡಲಾಗಿತ್ತು. ಸಂಶೋಧಕರು ಕೊಟ್ಟದ್ದಲ್ಲದೇ ಮತ್ಯಾವುದೇ ಕೆಫೀನ್‌ ಸೇವನೆ ಮಾಡಲು ಇವರಿಗೆ ಅವಕಾಶವಿರಲಿಲ್ಲ. ಈ ಜನರ ಮೆದುಳಿನ ಸಕ್ರಿಯತೆಯ ಸ್ಕ್ಯಾನ್‌ಗಳನ್ನು ವೀಕ್ಷಿಸಿದ ವಿಜ್ಞಾನಿಗಳು, ಕೆಫೀನ್ ಸೇವನೆ ಮಾಡದ ಮಂದಿಯಲ್ಲೇ ಹೆಚ್ಚಿನ ಗ್ರೇ ಪದಾರ್ಥ ಕಂಡುಬಂದಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...