alex Certify ಹುಲಿಯಂತೆ ಗರ್ಜಿಸಿ ಕರಡಿಯನ್ನು ಓಡಿಸಿದ ಭೂಪ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿಯಂತೆ ಗರ್ಜಿಸಿ ಕರಡಿಯನ್ನು ಓಡಿಸಿದ ಭೂಪ…! ವಿಡಿಯೋ ವೈರಲ್

ಎಷ್ಟೇ ಶಕ್ತಿಶಾಲಿಯಾಗಿದ್ದರೂ ಯುಕ್ತಿಯೊಂದಿದ್ದರೆ ಸಾಕು, ಎಂತಹ ಯುದ್ಧವನ್ನಾದರೂ ಗೆದ್ದು ಬಿಡಬಹುದು. ಶಕ್ತಿಯಿಂದ ಸಾಧ್ಯವಾಗದಿದ್ದದ್ದು, ಯುಕ್ತಿಯಿಂದ ಸಾಧಿಸಬಹುದು ಅನ್ನೋದಕ್ಕೆ ಈ ವಿಡಿಯೋ ನೋಡಿದ್ರೆ ನಿಮಗೆ ಇನ್ನಷ್ಟು ಕ್ಲಿಯರ್ ಆಗಿ ಅರ್ಥ ಆಗುತ್ತೆ.

ಅದು ರಾತ್ರಿಯ ಸಮಯ ಮನೆಯಾಕೆ ಫೋನಿನಲ್ಲಿ ಮಾತನಾಡುತ್ತ ಮನೆಯಿಂದ ಹೊರಗೆ ಬರುತ್ತಾಳೆ. ಹೊರಗೆ ಆಟವಾಡಿಕೊಂಡಿದ್ದ ಸಾಕು ನಾಯಿ ಒಮ್ಮಿಂದೊಮ್ಮೆ ಹೌಹಾರಿ ಓಡುವುದಕ್ಕೆ ಆರಂಭಿಸುತ್ತೆ. ಆಕೆಗೂ ಆ ತಕ್ಷಣ ಏನಾಗುತ್ತಿದೆ ಅನ್ನೋದು ಅರ್ಥವಾಗೋಲ್ಲ. ಕೊಂಚ ಗಮನ ಇಟ್ಟು ನೋಡಿದಾಗ ಕತ್ತಲಲ್ಲಿ ನಾಯಿಯನ್ನ ಅಟ್ಟಾಡಿಸಿಕೊಂಡು ಕರಡಿಯೊಂದು ಓಡ್ತಾ ಬರ್ತಿದೆ. ಕರಡಿಯನ್ನ ನೋಡಿದ್ದೇ ತಡ ಆಕೆ ಶಾಕ್ ಆಗಿರುತ್ತಾಳೆ. ಒಂದೇ ಸಮನೆ ಕೂಗಾಡೋದಕ್ಕೆ ಆರಂಭಿಸುತ್ತಾಳೆ. ನಾಯಿಯನ್ನ ಕರಡಿಯಿಂದ ಕಾಪಾಡುವುದಕ್ಕೆ ಕತ್ತಲಲ್ಲಿ ಓಡುವುದಕ್ಕೆ ನೋಡುತ್ತಾಳೆ.

ಆಕೆಗೆ ಕರಡಿಯಿಂದ ಹೇಗೆ ತಮ್ಮ ಮುದ್ದಿನ ನಾಯಿಯನ್ನ ರಕ್ಷಿಸಬೇಕು ಅನ್ನೋದು ಗೊತ್ತಾಗಿರಲಿಲ್ಲ. ಮತ್ತಷ್ಟು ಜೋರಾಗಿ ಕೂಗುತ್ತಾಳೆ. ಆಗ ಮನೆಯ ಒಳಗಿದ್ದ ಪತಿರಾಯ ಹೊರಗೆ ದೌಡಾಯಿಸಿಕೊಂಡು ಹೊರಗೆ ಬರುತ್ತಾನೆ. ಆ ಕ್ಷಣಕ್ಕೆ ಆತನೂ ಕೊಂಚ ಕನ್ಫೂಸ್ ಆಗಿ ಬಿಡುತ್ತಾನೆ, ಹಾಗಂತ ಆತ ಸುಮ್ಮನೆ ಇರೋಲ್ಲ. ಬದಲಾಗಿ ಕರಡಿಯನ್ನ ಹೆದರಿಸೋಕೆ ಹುಲಿಯಂತೆ ಘರ್ಜಿಸುತ್ತಾನೆ, ಆ ಸದ್ದಿಗೆ ಕರಡಿ ಹೆದರಿ ಓಡಿ ಹೋಗುತ್ತೆ.

ವಿಡಿಯೋ ನೋಡ್ತಿದ್ರೆ, ಒಂದು ರೀತಿ ತಮಾಷೆ, ನಾಟಕೀಯ ಅಂತ ಅನಿಸುತ್ತೆ ನಿಜ. ಆದರೂ ವ್ಯಕ್ತಿಯ ಸಮಯಪ್ರಜ್ಞೆ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.. ಈತನಿಗೆ ‘ಡ್ಯಾಡ್ ಆಫ್ ದಿ ಇಯರ್‘ ಎಂದು ಬಿರುದು ಕೂಡಾ ನೀಡಿದ್ದಾರೆ. ಈ ವಿಡಿಯೋ ನೋಡಿ ನೀವು, ಇದೇ ರೀತಿ ಮಾಡಲು ಹೋದರೆ ಕರಡಿ ನಿಮ್ಮ ಮೇಲೆಯೇ ಅಟ್ಯಾಕ್ ಮಾಡಿದ್ರೂ ಮಾಡ್ಬಹುದು ಯಾವುದಕ್ಕೂ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...