alex Certify Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ

ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತು. ನಂತರ ಆಸ್ಪತ್ರೆಯಲ್ಲಿ ಮೂರು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮನೆಗೆ ಹೋಗಲು ಸಿದ್ಧವಾಗಿದೆ.

ಊರಿಗೆ ಹೊರಡುವ ದಿನ ಆಸ್ಪತ್ರೆ ಸಿಬ್ಬಂದಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಿಕ್ಕಿತು. ಈ ಕುರಿತು ಗುಡ್‌ನ್ಯೂಸ್ ಮೂವ್‌ಮೆಂಟ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ನಾಯಿಯ ಹೆಸರು ಲಕ್.

ಲಕ್​ ಎರಡು ತಿಂಗಳ ವಾಸ್ತವ್ಯದ ನಂತರ ಆಸ್ಪತ್ರೆಯನ್ನು ತೊರೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಮಾಲೀಕರೊಂದಿಗೆ ಹೊರಡುತ್ತಿದ್ದಂತೆ ಸಿಬ್ಬಂದಿ ಸಾಲಾಗಿ ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸುವುದನ್ನು ನೋಡಬಹುದು. 54 ದಿನಗಳ ಹಿಂದೆ, ದರೋಡೆಯ ಸಂದರ್ಭಲ್ಲಿ ನಾಯಿಗೆ ಗುಂಡು ಹಾರಿಸಲಾಗಿತ್ತು ಆಗ ಅದು ತೀವ್ರವಾಗಿ ಗಾಯಗೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...