alex Certify ಕರಳು ಹಿಂಡುವ ಘಟನೆ: ಭೂಕಂಪದಿಂದ ನಾಶವಾದ ಮನೆ ಇದ್ದ ಸ್ಥಳಕ್ಕೆ ಹಿಂದಿರುಗಿದ ನಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರಳು ಹಿಂಡುವ ಘಟನೆ: ಭೂಕಂಪದಿಂದ ನಾಶವಾದ ಮನೆ ಇದ್ದ ಸ್ಥಳಕ್ಕೆ ಹಿಂದಿರುಗಿದ ನಾಯಿ

ಅಫ್ಘಾನಿಸ್ತಾನದ ನಾಯಿಯ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಕಥೆಯು ನೆಟ್ಟಿಗರ ಕರಳು ಹಿಂಡಿದ್ದು, ನಾಯಿಯ ಪರಿಸ್ಥಿತಿ ಕಂಡು ಭಾವುಕರಾಗಿದ್ದಾರೆ.

ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾವಿರಾರು ಜನರು ಸಾವನ್ನಪ್ಪಿದರೆ ಅಷ್ಟೇ ಸಂಖ್ಯೆಯಲ್ಲಿ ಜನರು ಗಾಯಗೊಂಡರು.

ರಿಕ್ಟರ್​ ಮಾಪಕದಲ್ಲಿ 6.1 ರ ತೀವ್ರತೆಯ ಭೂಕಂಪವು ಅನೇಕ ಮನೆಗಳನ್ನು ನಾಶಪಡಿಸಿದೆ. ಇಂತಹ ಧ್ವಂಸಗೊಂಡ ಮನೆಗಳು ಮತ್ತು ಪಾಳುಬಿದ್ದ ಸ್ಥಳದ ನಡುವೆ, ನಾಯಿಯೊಂದು ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡುವುದು ಮತ್ತು ಏನೋ ಹುಡುಕಲು ಪ್ರಯತ್ನಿಸುತ್ತಿರುವುದನ್ನು ಅಲ್ಲಿನ ಜನ ಗಮನಿಸಿದ್ದಾರೆ. ತನ್ನ ಮನೆ ಹಾಗೂ ಮನೆ ಮಾಲಿಕ ಕಾಣದೇ ಆ ನಾಯಿ ಪರದಾಡಿದೆ.

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

ಈ ನಾಯಿಗೆ ಸೇರಿದ ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ಆಹಾರ, ಆರೈಕೆಗಾಗಿ ನಾಯಿಯನ್ನು ತಮ್ಮೊಂದಿಗೆ ಕರೆದೊಯ್ಯುವುದಾಗಿ ನೆರೆಮನೆಯವರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...