alex Certify ಶ್ವಾನದ ಸ್ವಾಮಿನಿಷ್ಠೆ ಕಂಡು ಭಾವುಕರಾದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಸ್ವಾಮಿನಿಷ್ಠೆ ಕಂಡು ಭಾವುಕರಾದ ನೆಟ್ಟಿಗರು…!

ಶ್ವಾನಗಳು ನಮ್ಮ ಬೆಸ್ಟ್​ ಫ್ರೆಂಡ್​ ಎಂದು ಹೇಳಿದ್ರೆ ತಪ್ಪಾಗಲಾರದು. ಮನುಷ್ಯನ ಜೊತೆಗಿನ ಶ್ವಾನಗಳ ಬಾಂಧವ್ಯವನ್ನ ಬಣ್ಣಿಸೋಕೆ ಪದಗಳೇ ಸಿಗೋದಿಲ್ಲ.

ಮಾಲೀಕನೊಂದಿಗೆ ಅಷ್ಟೊಂದು ಗಟ್ಟಿಯಾಗಿ ಬಂಧವನ್ನ ಬೆಸೆಯೋ ಸಾಮರ್ಥ್ಯ ಇರೋದು ಕೇವಲ ಶ್ವಾನಗಳಿಗೆ ಮಾತ್ರ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋ ಒಂದರಲ್ಲಿ ಶ್ವಾನವೊಂದು ತನ್ನ ಮಾಲೀಕರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಹಿಂದೆಯೇ ಓಡಿದ್ದು ಈ ದೃಶ್ಯ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.

ಟರ್ಕಿಯ ಇಸ್ತಾನ್​ಬುಲ್​ನ ಮಹಿಳೆಯನ್ನ ಆಂಬುಲೆನ್ಸ್​​ನಲ್ಲಿ ಆಸ್ಪತ್ರೆ ಸಾಗಿಸಲು ಎಲ್ಲಾ ಸಿದ್ಧತೆ ನಡೆಸುತ್ತಿರುವಾಗ ಆಕೆಯ ನಾಯಿ ಅಲ್ಲೇ ವಾಹನದ ಸುತ್ತವೇ ಸುತ್ತುತ್ತಿತ್ತು. ಆಂಬುಲೆನ್ಸ್​ ಅಲ್ಲಿಂದ ಹೊರಡುತ್ತಿದ್ದಂತೆಯೇ ಶ್ವಾನ ಕೂಡ ಆಂಬುಲೆನ್ಸ್​ನ ಹಿಂದೆಯೇ ಓಡಿದೆ. ತನ್ನ ಮಾಲೀಕೆಯನ್ನ ನೋಡುವವರೆಗೂ ಆಸ್ಪತ್ರೆಯಲ್ಲೇ ತಾಳ್ಮೆಯಿಂದಲೇ ಕಾದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶ್ವಾನಗಳ ಸ್ವಾಮಿನಿಷ್ಠೆಗೆ ತಲೆಬಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...