alex Certify ಬೃಹತ್‌ ಜೀವಿ ಗೌಪ್ಯವಾಗಿ ಅರಣ್ಯದಲ್ಲಿ ವಾಸವಿರುವುದನ್ನು ಕಂಡರಂತೆ ಈ ಬೇಟೆಗಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೃಹತ್‌ ಜೀವಿ ಗೌಪ್ಯವಾಗಿ ಅರಣ್ಯದಲ್ಲಿ ವಾಸವಿರುವುದನ್ನು ಕಂಡರಂತೆ ಈ ಬೇಟೆಗಾರ….!

 

ಆನೆ ಬಿಟ್ಟರೆ ಭೂಮಿ ಮೇಲೆ ನಡೆದಾಡುವ ಮತ್ತೊಂದು ದೈತ್ಯ ಪ್ರಾಣಿ ಇನ್ನೊಂದಿಲ್ಲ ಎಂದು ವಿಜ್ಞಾನ ಹೇಳುತ್ತಿದ್ದರೂ, ಕೆಲವರು ಮಾತ್ರ ಈ ವಾದವನ್ನು ಒಪ್ಪದೆಯೇ ’ಏಪ್‌ ಮ್ಯಾನ್‌’, ’ಕಾಂಗ್‌’ ಮಾದರಿಯ ಬೃಹತ್‌ ಗಾತ್ರದ ಮಂಗಗಳ ಪ್ರಭೇದ ಇದೆ ಎಂದು ವಾದಿಸುತ್ತಲೇ ಬಂದಿದ್ದಾರೆ. ಇನ್ನೂ ಕೆಲವರು ಇವರನ್ನು ‘ಆದಿಮಾನವರು’ ಎಂದು ಕೂಡ ಕರೆದಿದ್ದಾರೆ.

ಒಟ್ಟಿನಲ್ಲಿ ’ಬಿಗ್‌ಫೂಟ್‌’ ಎಂದು ಅವರ ಹೆಜ್ಜೆ ಗುರುತುಗಳಿಂದ ಪತ್ತೆ ಮಾಡಲಾಗುವ ಜೀವಿಗಳು ಇದ್ದಾರೆಯೇ ಎನ್ನುವ ಸಂಶಯದ ನಡುವೆಯೇ ಅಮೆರಿಕದ ವೃತ್ತಿಪರ ಬೇಟೆಗಾರ ಮಾರ್ಕ್‌ ಹೊಸ ಸುದ್ದಿ ಬಯಲು ಮಾಡಿದ್ದಾರೆ.

ಅವರು 15 ಅಡಿಗಳಷ್ಟು ಎತ್ತರದ ಜೀವಿಗಳು ನಿಂತುಕೊಂಡು ಓಡಾಡುತ್ತಿರುವ ಶಬ್ದಗಳನ್ನು ದಟ್ಟ ಅರಣ್ಯದ ನದಿ ತೀರದಲ್ಲಿ ಕೇಳಿಸಿಕೊಂಡಿದ್ದಾಗಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ದೊಡ್ಡ ಡೈನೊಸಾರ್‌ಗಳು ಪರಸ್ಪರರ ಸಂವಹನ ನಡೆಸುವ ಮಾದರಿಯಲ್ಲಿ ಗಡುಸು ಧ್ವನಿಯಲ್ಲಿ ಅರಚುತ್ತಿದ್ದ ಪ್ರಾಣಿಗಳು, ಅವುಗಳ ಹೆಜ್ಜೆ ಶಬ್ದಕ್ಕೆ ಭೂಮಿ ಸ್ವಲ್ಪ ಕಂಪಿಸುತ್ತಿತ್ತು. ಉದ್ದನೆಯ ತೋಳುಗಳ ಜೀವಿಗಳನ್ನು ಏನೆಂದು ಕರೆಯಬೇಕು ಎನ್ನುವುದೇ ತಿಳಿಯಲಿಲ್ಲ. ಅರಣ್ಯದಲ್ಲಿ ಬೇಟೆಗೆ ತೆರಳಿದ್ದ ನಾನು ಮತ್ತು ಸ್ನೇಹಿತರು ಹಲವು ನಿಮಿಷಗಳು ದಂಗಾಗಿ ನಿಂತಿದ್ದೆವು ಎಂದು ಮಾರ್ಕ್‌ ಅನುಭವ ಮೆಲುಕು ಹಾಕಿದ್ದಾರೆ.

BIG NEWS: ಶಾಸಕ ಜಮೀರ್ ಅಹ್ಮದ್ ಗೆ ಮತ್ತೊಂದು ಶಾಕ್; ದಾಖಲೆ ಸಲ್ಲಿಸುವಂತೆ ನೋಟೀಸ್ ಜಾರಿ

ಅವರು ಜೀವಿಗಳು ನೀರು ಕುಡಿದ ತಕ್ಷಣ ಜಾಗ ಖಾಲಿ ಮಾಡಲಿಲ್ಲವಂತೆ. ಅವುಗಳ ಹೆಜ್ಜೆ ಸಪ್ಪಳ ಪೂರ್ತಿ ಕಡಿಮೆಯಾಗಿ, ಭೂಮಿ ಕಂಪಿಸುವುದು ಕೂಡ ನಿಂತ ಮೇಲೆಯೂ 10 ನಿಮಿಷ ಮರೆಯಲ್ಲೇ ಇದ್ದು, ಬಳಿಕ ನಗರಗಳತ್ತ ಕಾರಿನಲ್ಲಿ ದೌಡಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...