alex Certify ʼಬೊಜ್ಜುʼ ಕರಗಿಸುವ ಆಹಾರ ಪದಾರ್ಥಗಳು ಯಾವುವು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೊಜ್ಜುʼ ಕರಗಿಸುವ ಆಹಾರ ಪದಾರ್ಥಗಳು ಯಾವುವು ಗೊತ್ತಾ…..?

ಆರೋಗ್ಯಕರ ಕೊಬ್ಬು, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಸೇವನೆಯಿಂದ ಹೊಟ್ಟೆಯ ಬೊಜ್ಜನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಅದರಲ್ಲೂ ನಾರು ಭರಿತ ಆಹಾರ ಸೇವನೆಯಿಂದ ಹೊಟ್ಟೆಯ ಕೊಬ್ಬು ಇನ್ನೂ ಕರಗುತ್ತದೆ ಎಂದು ತಿಳಿದುಬಂದಿದೆ. ಬೆಲ್ಲಿ ಫ್ಯಾಟ್ ಹೋಗಲಾಡಿಸಲು ಈ ಕೆಳಗಿನ ಐದು ಆಹಾರಗಳನ್ನು ಸೇವಿಸಿ.

ಒಣ ಬೀಜ

ಕುಂಬಳಕಾಯಿ, ಕಲ್ಲಂಗಡಿ ಹಣ್ಣು ಇತ್ಯಾದಿಗಳ ಒಣ ಬೀಜಗಳಲ್ಲಿರುವ ಪೌಷ್ಟಿಕಾಂಶ ಬೊಜ್ಜು, ಹೃದಯ ಸಂಬಂಧಿ ಸಮಸ್ಯೆಗಳು, ಚರ್ಮದ ನೆರಿಗೆ, ಅಧಿಕ ರಕ್ತದೊತ್ತಡ ಇತ್ಯಾದಿಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಇದು ಪದೇಪದೇ ತಿನ್ನಬೇಕೆಂಬ ಹಂಬಲವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಪ್ರತಿದಿನ ಸ್ವಲ್ಪ ಒಣ ಬೀಜಗಳನ್ನು ಸಲಾಡ್ ಮತ್ತು ಹಣ್ಣುಗಳ ಜೊತೆಗೆ ಸೇವಿಸಿ.

ಹಸಿರು ತರಕಾರಿ

ಅತ್ಯಂತ ಕಡಿಮೆ ಕ್ಯಾಲೋರಿ ಇರುವ ಹಸಿರು ತರಕಾರಿಗಳು ಬೊಜ್ಜಿನ ವಿರುದ್ಧ ಹೋರಾಡುತ್ತವೆ. ನಾರಿನಂಶ ಭರಿತವಾಗಿರುವ ಇವು ಪಚನಕ್ರಿಯೆಯನ್ನು ಸರಾಗಗೊಳಿಸಿ ದೇಹ ತೂಕವನ್ನು ಕಡಿಮೆಗೊಳಿಸುತ್ತದೆ.

ಮೊಟ್ಟೆ

ಸ್ನಾಯುಗಳನ್ನು ಸದೃಢಗೊಳಿಸಿ ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ಮೊಟ್ಟೆಯ ಪಾತ್ರ ಮಹತ್ವದ್ದು. ಆದ್ದರಿಂದ ಜಿಮ್ ಗೆ ಹೋಗುವ ಬಹುತೇಕ ಜನರು ಮೊಟ್ಟೆಯನ್ನು ನಿಯಮಿತವಾಗಿ ತಿನ್ನುತ್ತಾರೆ.

ಪ್ರೋಟೀನ್

ಇದು ಕೊಬ್ಬನ್ನು ಕರಗಿಸಿ ಸ್ನಾಯುಗಳನ್ನು ಸದೃಢವಾಗಿಸುತ್ತದೆ. ಆದ್ದರಿಂದ ಬಹುತೇಕ ವೇಟ್ ಲಾಸ್ ಡಯಟ್ ನಲ್ಲಿ ಪ್ರೊಟೀನ್ ಅಧಿಕವಿರುವ ಆಹಾರಗಳು ಇರುತ್ತವೆ.

ಪೀನಟ್ ಬಟರ್

ಕಡಿಮೆ ಕೊಲೆಸ್ಟರಾಲ್ ಇರುವ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹ ತೂಕವನ್ನು ಕಡಿಮೆಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...