alex Certify ಮನೆಯಂಗಳದಲ್ಲಿ ʼಬಾಳೆ ಮರʼ ಬೆಳೆಸುವುದರಿಂದ ಸಿಗುವ ಲಾಭವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಂಗಳದಲ್ಲಿ ʼಬಾಳೆ ಮರʼ ಬೆಳೆಸುವುದರಿಂದ ಸಿಗುವ ಲಾಭವೇನು ಗೊತ್ತಾ….?

ಸಾಮಾನ್ಯವಾಗಿ ಹಳ್ಳಿಗಳ ಕಡೆ ಮನೆ ಹತ್ತಿರ ಬಾಳೆಮರವನ್ನು ಬೆಳೆಸುತ್ತಾರೆ. ಈ ಬಾಳೆ ಮರದ ಹೂವು, ಕಾಂಡ, ಕಾಯಿ, ಹಣ್ಣು ಮತ್ತು ಎಲೆಗಳು ಕೂಡ ಆರೋಗ್ಯಕರವಾಗಿದ್ದು, ಇವುಗಳನ್ನು ಬಳಸಿ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

*ಬಾಳೆ ಹಣ್ಣು : ಇದು ಉತ್ತಮವಾದ ಫೈಬರ್ ಅಂಶವನ್ನು ಹೊಂದಿರುತ್ತದೆ. ಇದು ಉತ್ತಮ ಜೀರ್ಣಕಾರಿಯಾಗಿದೆ. ಇದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.

*ಬಾಳೆಹೂವು : ಇದು ಡಯಾಬಿಟಿಸ್ ಅನ್ನು ನಿಯಂತ್ರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲಗೊಳಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

*ಬಾಳೆಮರದ ಕಾಂಡ : ಇದು ದೇಹದಲ್ಲಿ ಸಂಗ್ರಹವಾದ ಸಕ್ಕರೆ ಮತ್ತು ಕೊಬ್ಬನ್ನು ಹೊರಹಾಕುತ್ತದೆ. ಇದು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಹಾಗೇ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವುದನ್ನು ತಡೆಯುತ್ತದೆ.

*ಬಾಳೆಕಾಯಿ : ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು, ಕರುಳನ್ನು ಬಲಪಡಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

*ಬಾಳೆ ಎಲೆ : ಇದರಲ್ಲಿ ಊಟ ಮಾಡುವುದರಿಂದ ಹೊಟ್ಟೆಯ ಇನ್ ಫೆಕ್ಷನ್ ಸಮಸ್ಯೆ ಕಾಡುವುದಿಲ್ಲ. ಇದು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಇದರಲ್ಲಿರುವ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...