alex Certify ಹೈಪರ್‌ಟೆನ್ಷನ್‌ ನಿಯಂತ್ರಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಪರ್‌ಟೆನ್ಷನ್‌ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

’ಸೈಲೆಂಟ್ ಕಿಲ್ಲರ್‌’ ಎಂದೇ ಕರೆಯಲಾಗುವ ಹೈಪರ್‌ಟೆನ್ಷನ್‌ ಜಗತ್ತಿನಲ್ಲಿರುವ ಅತ್ಯಂತ ಸಾಮಾನ್ಯ ಅನಾರೋಗ್ಯಗಳಲ್ಲಿ ಒಂದಾಗಿದೆ. ಅಧಿಕ ರಕ್ತದೊತ್ತಡ ಎಂದು ಕರೆಯಲಾಗುವ ಈ ಪರಿಸ್ಥಿತಿಯಲ್ಲಿ, ಅಪಧಮನಿಯಲ್ಲಿ ಹರಿಯುವ ರಕ್ತದ ಮೇಲೆ ಅಧಿಕ ಒತ್ತಡವಿರುತ್ತದೆ.

ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಿದೆ. ಅಧಿಕ ರಕ್ತದೊತ್ತಡ ನಿರ್ವಹಣೆಗೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ಸಕಾರಾತ್ಮಕ ಪರಿಣಾಮಗಳು ಆಗುವುದಿಲ್ಲ.

ರಕ್ತದೊತ್ತಡವನ್ನು ಸಮತೋಲಿತವಾಗಿ ಕಾಪಾಡಿಕೊಳ್ಳಲು ಏನೆಲ್ಲಾ ಸರಳ ಯತ್ನಗಳನ್ನು ಮಾಡಬಹುದು…? ಹೈಪರ್‌ಟೆನ್ಷನ್‌ ಇದ್ದಲ್ಲಿ, ಅದರ ಸೂಕ್ತ ನಿರ್ವಹಣೆ ಹೇಗೆ….? ಆ ನಿಟ್ಟಿನಲ್ಲಿ, ತಜ್ಞರು ನೀಡಿರುವ ಕೆಲವೊಂದು ಸಲಹೆಗಳು ಇಲ್ಲಿವೆ.

ಜೀವನಶೈಲಿಯ ಬಗ್ಗೆ ಕಾಳಜಿ ವಹಿಸುವುದು

ಆರೋಗ್ಯಯುತ ರಕ್ತದೊತ್ತಡದ ಮಟ್ಟಗಳನ್ನು ಕಾಪಾಡಲು ಬರೀ ಮದ್ದುಗಳನ್ನೇ ನಂಬಲು ಸಾಧ್ಯವಿಲ್ಲ. ಸಸ್ಯಜನ್ಯ ಪಥ್ಯ ಮತ್ತು ನಿಯಮಿತ ವ್ಯಾಯಾಮಗಳಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಅಧ್ಯಯನಗಳು ತೋರಿವೆ. ಹಾಗಾಗಿ, ನಿಯಂತ್ರಿತ ಜೀವನಶೈಲಿ ಮೂಲಕ ಹೈಪರ್‌ಟೆನ್ಷನ್‌ಗೆ ಕಡಿವಾಣ ಹಾಕುವುದು ಸೂಕ್ತ.

ಮದ್ದುಗಳ ಕ್ರಮವಲ್ಲದ ಬಳಕೆ

ಮಾನವ ನಿರ್ಮಿತ ಮದ್ದುಗಳಿಂದ ರೋಗ ವಾಸಿಯಾಗುವುದರೊಂದಿಗೆ ಅನೇಕ ಅಡ್ಡಪರಿಣಾಮಗಳು ಉಂಟಾಗುವುದು ಎಲ್ಲರಿಗೂ ತಿಳಿದ ಸತ್ಯ. ಅಂತೆಯೇ, ಸ್ಟೆರಾಯಿಡೇತರ ಉರಿಯೂತ ನಿವಾರಕ ಮದ್ದುಗಳು (ಎನ್‌ಎಸ್‌ಎಐಡಿ), ಆಂಟಿಡಿಪ್ರೆಸ್ಸಂಟ್‌ಗಳು ಮತ್ತು ಕಾರ್ಟಿಕೋಸ್ಟೆರಾಯಿಡ್‌ಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಹೀಗಾಗಿ, ಮದ್ದು ಸೇವನೆ ವಿಚಾರದಲ್ಲಿ ವೈದ್ಯರ ಬಳಿ ಪಾರದರ್ಶಕತೆ ಕಾಪಾಡಿಕೊಂಡು, ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ.

ಒಟ್ಟಾರೆ ಆರೋಗ್ಯದ ಮೇಲೆ ನಿಗಾ ಇಲ್ಲದೇ ಇರುವುದು

ಸ್ಥೂಲಕಾಯ, ನಿದ್ರಾಹೀನತೆ, ಕಿಡ್ನಿ ಸಮಸ್ಯೆಗಳು, ಹಾರ್ಮೋನಲ್ ಅಸಮತೋಲನ ಇತ್ಯಾದಿಗಳೆಲ್ಲಾ ಹೈಪರ್‌ಟೆನ್ಷನ್‌ಗೆ ಕಾರಣವಾಗಬಹುದು. ಹಾಗಾಗಿ, ಆರೋಗ್ಯದ ಸ್ಥಿತಿಗತಿಗಳ ಮೇಲೆ ಆಗಾಗ ನಿಗಾ ಇಡುವುದು ಮುಖ್ಯವಾಗಿದೆ.

ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಉಪಾಯಗಳು

1. ಆಲಸ್ಯದ ಜೀವನವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ನಿರಂತರವಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ.

2. ನಿಮ್ಮ ರಕ್ತದೊತ್ತಡದ ಮಟ್ಟಗಳನ್ನು ಗಮನಿಸುತ್ತಾ ಇರಿ.

3. ಯೋಗ, ಧ್ಯಾನ, ಅರೋಮಾಥೆರಪಿಯಂಥ ಒತ್ತಡ ನಿವಾರಕ ಅಭ್ಯಾಸಗಳನ್ನು ಮಾಡುತ್ತಾ ಇರಿ.

4. ಆರೋಗ್ಯಯುತವಾದ ಪಥ್ಯ ಕಾಪಾಡಿಕೊಂಡು ಹಣ್ಣು-ತರಕಾರಿ, ಒಣಹಣ್ಣು, ಧಾನ್ಯಗಳು, ಪೌಲ್ಟ್ರಿ ಉತ್ಪನ್ನಗಳಂಥ ಆಹಾರಗಳನ್ನು ಅರ್ಥಪೂರ್ಣ ಪ್ರಮಾಣದಲ್ಲಿ ಸೇವನೆ ಮಾಡಿ. ಅಧಿಕ ಉಪ್ಪು, ಸಕ್ಕರೆ ಹಾಗೂ ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.

5. ನಿಮ್ಮ ಪಥ್ಯ, ಔಷಧೋಪಚಾರ ಮತ್ತು ಆರೋಗ್ಯ ಸಂಬಂಧಿ ಇತರೆ ವಿಚಾರಗಳ ಕುರಿತಂತೆ ವೈದ್ಯರನ್ನು ಆಗಾಗ ಕಾಣುತ್ತಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...