alex Certify ಹೊಟ್ಟೆ ಹುಳದ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಳದ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಹೊಟ್ಟೆ ಹುಳಗಳ ಸಮಸ್ಯೆ ತುಂಬಾ ಸಾಮಾನ್ಯ. ಸಿಹಿ ತಿನಿಸುಗಳನ್ನು ಹೆಚ್ಹೆಚ್ಚು ತಿಂದಾಗ ಈ ಹುಳಗಳು ತೊಂದರೆ ಕೊಡಲಾರಂಭಿಸುತ್ತವೆ. ಅನೇಕರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಅಜೀರ್ಣ, ವಾಕರಿಕೆ, ವಾಂತಿ, ಹಸಿವಾಗದೇ ಇರುವುದು, ನಿದ್ರಾಹೀನತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಹೊಟ್ಟೆ ಹುಳಗಳು ಕಾರಣವಾಗುತ್ತವೆ. ಕೆಲವು ಪರಿಣಾಮಕಾರಿ ಮನೆಮದ್ದುಗಳ ಮೂಲಕ ಜಂತು ಹುಳಗಳಿಂದ ಮುಕ್ತಿ ಪಡೆಯಬಹುದು.

ಓಮದ ಕಾಳು

ಅನೇಕ ಬಾರಿ ಹೊಟ್ಟೆ ಹುಳಗಳ ಕಾಟದಿಂದಾಗಿ ರಾತ್ರಿ ಮಲಗಲು ಕೂಡ ಸಾಧ್ಯವಾಗುವುದಿಲ್ಲ. ತೀವ್ರವಾದ ಹೊಟ್ಟೆ ನೋವು ಬರುತ್ತದೆ. ಅಂತಹ ಸಂದರ್ಭದಲ್ಲಿ ಓಮವನ್ನು ಸೇವಿಸಬೇಕು. ಚಿಟಿಕೆ ಉಪ್ಪಿನ ಜೊತೆಗೆ ಓಮವನ್ನು ಅಗಿದು ತಿಂದು ಒಂದು ಲೋಟ ಬಿಸಿ ನೀರು ಕುಡಿಯರಿ ಅಥವಾ ಓಮವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಸೋಸಿ ಅದನ್ನು ಸೇವಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಕೂಡ ಹೊಟ್ಟೆ ಹುಳಗಳನ್ನು ನಿವಾರಿಸಬಲ್ಲದು. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಚಟ್ನಿಯನ್ನು ಸೇವನೆ ಮಾಡಬಹುದು. ಅಥವಾ ಹಸಿ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಅಗಿದು ತಿನ್ನಿ.

ಬೇವಿನ ಎಲೆ

ಕಹಿ ಬೇವಿನ ಎಲೆಗಳು ಹೊಟ್ಟೆಯ ಹುಳಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತವೆ. ಕ್ರಿಮಿಕೀಟಗಳ ಸಮಸ್ಯೆಯನ್ನು ಹೋಗಲಾಡಿಸಲು ಇದು ರಾಮಬಾಣ. ಒಂದು ಲೋಟ ನೀರಿಗೆ ನಾಲ್ಕಾರು ಬೇವಿನ ಎಲೆಗಳನ್ನು ಹಾಕಿ ಕುದಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ತುಳಸಿ ಎಲೆ

ತುಳಸಿ ಎಲೆಗಳು ಅನೇಕ ರೋಗಗಳನ್ನು ಗುಣಪಡಿಸಲು ಬಹಳ ಸಹಾಯಕವಾಗಿವೆ. ತುಳಸಿ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಮಲದ ಜೊತೆಗೆ ಹುಳುಗಳು ದೇಹದಿಂದ ಹೊರಹೋಗುತ್ತದೆ. ಇದರಿಂದ ಉದರ ಬಾಧೆ ಸಾಕಷ್ಟು ಉಪಶಮನವಾಗುತ್ತದೆ.

ಹಸಿ ಪಪ್ಪಾಯ

ಹಸಿ ಪಪ್ಪಾಯಿ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹೊಟ್ಟೆಯ ಹುಳುಗಳನ್ನು ತೊಡೆದುಹಾಕಲು ಇದು ತುಂಬಾ ಸಹಾಯಕವಾಗಿದೆ. ಹಸಿ ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಮಾತ್ರ ಸೇವಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...