alex Certify ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದು; ಇದರ ಹಿಂದಿನ ಕಾರಣ ತಜ್ಞರಿಂದಲೇ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದು; ಇದರ ಹಿಂದಿನ ಕಾರಣ ತಜ್ಞರಿಂದಲೇ ಬಹಿರಂಗ…!

ನೀರಿಲ್ಲದೇ ನಾವು ಬದುಕುವುದು ಅಸಾಧ್ಯ. ಏಕೆಂದರೆ ನಮ್ಮ ದೇಹವು 70 ಪ್ರತಿಶತ ನೀರಿನಿಂದಲೇ ಮಾಡಲ್ಪಟ್ಟಿದೆ. ದೇಹದ ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನೀರನ್ನು ಸೇವಿಸುವ ನಿಯಮಗಳು ಮತ್ತು ವಿಧಾನಗಳು ತಿಳಿದಿರಬೇಕು.

ರಾತ್ರಿಯಲ್ಲಿ ನೀರನ್ನು ಸ್ವಲ್ಪವೇ ಕುಡಿಯಬೇಕು. ಮಲಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಬಾರದು ಎಂದು ಹೆಚ್ಚಿನ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಇದು ಅನೇಕ ರೀತಿಯಲ್ಲಿ ಹಾನಿಯನ್ನುಂಟುಮಾಡುತ್ತದೆ.

ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದರಿಂದ ಆಗುವ ಅನಾನುಕೂಲಗಳು

ನಿದ್ರೆಗೆ ಅಡಚಣೆ

ರಾತ್ರಿ ಹೆಚ್ಚು ನೀರು ಕುಡಿದರೆ ನಿದ್ದೆಯಿಂದ ಎದ್ದು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಇದರಿಂದ ನಿರಂತರವಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಆರೋಗ್ಯಕ್ಕೆ ಶಾಂತಿಯುತ ನಿದ್ರೆ ಮುಖ್ಯವಾಗಿದೆ. ನಿದ್ರೆ ಸರಿಯಾಗಿ ಆಗದೇ ಇದ್ದಲ್ಲಿ ಮರುದಿನ ಆಯಾಸ ಮತ್ತು ಆಲಸ್ಯವನ್ನು ಎದುರಿಸಬೇಕಾಗುತ್ತದೆ.

ಹೊಟ್ಟೆ ಭಾರವಾಗುವುದು

ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ಹೊಟ್ಟೆ ಭಾರವಾಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ ನಿದ್ರೆಗೆ ಅಡಚಣೆ ಉಂಟು ಮಾಡಬಹುದು.

ಕಿಡ್ನಿಗೆ ಹಾನಿ

ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದು ಮೂತ್ರಪಿಂಡಗಳಿಗೆ  ಒಳ್ಳೆಯದಲ್ಲ. ಮಿತಿ ಮೀರಿ ನೀರು ಸೇವಿಸಿದರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದರಿಂದ ಕಿಡ್ನಿಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...