alex Certify ರಾಜ-ಮಹಾರಾಜರು ಚಳಿಗಾಲದಲ್ಲಿ ಮಾಂಸಹಾರವನ್ನು ಮಾತ್ರ ತಿನ್ನುತ್ತಾರೆಯೇ….? ಇಲ್ಲಿದೆ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ-ಮಹಾರಾಜರು ಚಳಿಗಾಲದಲ್ಲಿ ಮಾಂಸಹಾರವನ್ನು ಮಾತ್ರ ತಿನ್ನುತ್ತಾರೆಯೇ….? ಇಲ್ಲಿದೆ ಅಸಲಿ ಸತ್ಯ

ಆಹಾರದ ದೃಷ್ಟಿಯಿಂದ ಚಳಿಗಾಲವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಶೀತದಿಂದ ರಕ್ಷಿಸಿಕೊಳ್ಳಲು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ರಾಜ ಮಹಾರಾಜರು ಕೂಡ ಚಳಿಗಾಲದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಈ ಋತುವಿನಲ್ಲಿ ಅನೇಕ ರೀತಿಯ ಭಕ್ಷ್ಯಗಳನ್ನು ಸೇವಿಸುತ್ತಿದ್ದರು.

ಚಳಿಗಾಲದಲ್ಲಿ ರಾಜ ಮಹಾರಾಜರ ವಿಶೇಷ ತಿನಿಸುಗಳಲ್ಲಿ ಪ್ರಮುಖವಾದದ್ದೆಂದರೆ ಗೋಂದು ಮತ್ತು ಮೆಂತ್ಯದ ಲಾಡು. ಇದರ ಜೊತೆಗೆ ಖಿಚಡಿಗೆ ಕೂಡ ಪ್ರಾಧಾನ್ಯತೆಯಿತ್ತು. ರಾಜಸ್ಥಾನದಲ್ಲಿ ಈ ತಿನಿಸುಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ರಾಜಮನೆತನದ ಬಾಣಸಿಗರು ಈ ಖಿಚಡಿಯನ್ನು ವಿಶೇಷ ರೀತಿಯಲ್ಲಿ ತಯಾರಿಸುತ್ತಿದ್ದರು.

ಕೇಸರಿ ಹಾಲುಅನೇಕ ರಾಜರು ಚಳಿಗಾಲದಲ್ಲಿ ಬಿಸಿ ಬಿಸಿ ಹಾಲಿಗೆ ಕೇಸರಿ ಬೆರೆಸಿ ಕುಡಿಯುತ್ತಿದ್ದರು. ಕೇಸರಿ ನಮ್ಮನ್ನು ಶೀತದಿಂದ ರಕ್ಷಿಸುತ್ತದೆ. ಚಳಿಗಾಲದಲ್ಲಿ ಮಾಂಸಾಹಾರಿಗಳು ಜಿಂಕೆ ಮತ್ತು ಕಾಡುಹಂದಿಗಳ ಮಾಂಸಕ್ಕೆ ಆದ್ಯತೆ ನೀಡುತ್ತಾರೆ. ಏಕೆಂದರೆ ಇವು ದೇಹದಲ್ಲಿ ಉಷ್ಣವನ್ನು ಉಂಟುಮಾಡುತ್ತವೆ.

ಬ್ರಿಟಿಷ್ ಸಾಮ್ರಾಜ್ಯದ ಮೊದಲು ಮತ್ತು ನಂತರ ರಾಜ ಮಹಾರಾಜರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನ ರಾಜ-ಮಹಾರಾಜರು ಸ್ಥಳೀಯ ಸಂಸ್ಕೃತಿಗೆ ಪ್ರಾಮುಖ್ಯತೆ ನೀಡುತ್ತಿದ್ದರು.  ಆದರೆ ಬ್ರಿಟಿಷ್ ಆಳ್ವಿಕೆಯ ನಂತರ ಇಂಗ್ಲಿಷ್ ಸಂಸ್ಕೃತಿಯು ಪ್ರಬಲವಾಯಿತು.

ರಾಗಿ ಖಿಚಡಿ – ರಾಗಿಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಇದು ರುಚಿಕರವೂ ಹೌದು. ಅದಕ್ಕಾಗಿಯೇ ಚಳಿಗಾಲದಲ್ಲಿ ಪ್ರತಿ ಮನೆಯಲ್ಲೂ ರಾಗಿ ಖಿಚಡಿ ಮಾಡುತ್ತಾರೆ. ರಾಜಮನೆತನದಲ್ಲಿ ಕೂಡ ಚಳಿಗಾಲದಲ್ಲಿ ರಾಗಿ ಗಂಜಿ ಮತ್ತು ದಾಲ್-ಬಾಟಿಯನ್ನು ಒಟ್ಟಿಗೆ ತಿನ್ನುವ ಸಂಪ್ರದಾಯವಿತ್ತು. ಈ ಆಹಾರವು ಪೌಷ್ಠಿಕಾಂಶದ ಜೊತೆಗೆ ಶೀತದಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ.

ರಾಜಮನೆತನಗಳಲ್ಲಿ ಆರೋಗ್ಯಕರ ಭಕ್ಷ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಮೊಸರಿನ ಕರಿ, ರಾಗಿಯಿಂದ ಮಾಡಿದ ತಿನಿಸುಗಳು, ಬೆಲ್ಲ, ಖಿಚಡಿ ಜೊತೆಗೆ ಶುದ್ಧ ದೇಸಿ ತುಪ್ಪವನ್ನು ಸೇವಿಸಲಾಗುತ್ತಿತ್ತು. ಬಾಜ್ರಾ ರಾಜಸ್ಥಾನದ ಮುಖ್ಯ ಆಹಾರವಾಗಿದೆ. ಇದು ಪೌಷ್ಟಿಕಾಂಶದ ಜೊತೆಗೆ, ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿದೆ. ಅರಮನೆಗಳಲ್ಲಿ ಇವುಗಳಿಂದ ಅತ್ಯುತ್ತಮ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು. ಆದರೆ ಸಾಮಾನ್ಯ ಜನರು ಅವುಗಳನ್ನು ಸರಳ ರೀತಿಯಲ್ಲಿ ತಿನ್ನುತ್ತಿದ್ದರು. ರಾಜ-ಮಹಾರಾಜರ  ಆಹಾರ ಪದ್ಧತಿ ಇಂದಿಗೂ ನಮಗೆ ಸ್ಫೂರ್ತಿದಾಯಕ. ಚಳಿಗಾಲದಲ್ಲಿ ಕೇವಲ ಮಾಂಸಾಹಾರವನ್ನು ನೆಚ್ಚಿಕೊಳ್ಳದೇ ಸಸ್ಯಾಹಾರಗಳಲ್ಲಿ ವಿಭಿನ್ನತೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...