alex Certify BIG NEWS: ರಾಜಕೀಯಕ್ಕೆ ಡಿ.ಕೆ. ಶಿವಕುಮಾರ್ ಗುಡ್ ಬೈ…? ಸುಳಿವು ನೀಡಿದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜಕೀಯಕ್ಕೆ ಡಿ.ಕೆ. ಶಿವಕುಮಾರ್ ಗುಡ್ ಬೈ…? ಸುಳಿವು ನೀಡಿದ ಹೇಳಿಕೆ

ರಾಮನಗರ: ರಾಜಕೀಯ ಜೀವನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡ್ ಬೈ ಹೇಳುವ ಸುಳಿವು ನೀಡಿದ್ದಾರೆ.

ಕನಕಪುರದ ರೂರಲ್ ಎಜುಕೇಶನ್ ಸೊಸೈಟಿಯಲ್ಲಿ ಇತ್ತೀಚೆಗೆ ನಡೆದ ಆಯುಧ ಪೂಜೆ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನಗೆ ಈಗ 61 ವರ್ಷ ವಯಸ್ಸಾಗಿದೆ. ಇನ್ನು ಎಂಟರಿಂದ ಹತ್ತು ವರ್ಷ ರಾಜಕಾರಣ ಮಾಡಬಹುದು. ನಂತರ ರಾಜಕಾರಣ ಮಾಡುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜಕೀಯ ಜೀವನಕ್ಕೆ ಗುಡ್ ಬೈ ಹೇಳುವ ಸುಳಿವು ನೀಡಿದ್ದಾರೆ.

ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಯಾವ ವಿಚಾರಕ್ಕೂ ಯಾರ ಎದುರು ಕೈಚಾಚಿಲ್ಲ. ಕೆಲವು ಕೇಸುಗಳು ನನ್ನ ಮೇಲಿವೆ. ಅದಲ್ಲವನ್ನು ನಾನು ಅನುಭವಿಸಿದ್ದೇನೆ. ನೀವೆಲ್ಲ ಪ್ರೀತಿ ವಿಶ್ವಾಸದಿಂದ ನನ್ನನ್ನು ಬೆಳೆಸಿ ಒಂದು ಸ್ಥಾನಕ್ಕೆ ತಂದಿದ್ದೀರಿ. ಇನ್ನು ದೊಡ್ಡ ಸ್ಥಾನಕ್ಕೆ ಹೋಗಬಹುದು. ನನಗೆ 61 ವರ್ಷವಾಗಿದ್ದು, ಇನ್ನೂ ಎಂಟರಿಂದ ಹತ್ತು ವರ್ಷ ಅಂದರೆ 70 ವರ್ಷದವರೆಗೆ ರಾಜಕಾರಣ ಮಾಡಬಹುದು ಅಷ್ಟೇ ಎಂದು ಹೇಳಿದ್ದಾರೆ. ಈ ಮೂಲಕ ರಾಜಕೀಯ ಜೀವನದಿಂದ ದೂರವಾಗುವ ಸುಳಿವು ನೀಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...