alex Certify ನನ್ನದು ಧಮ್ಕಿ ಸಂಸ್ಕೃತಿಯಲ್ಲ, ಸೆಟ್ಲ್ ಮೆಂಟ್ ಮಾಡುವ ಸಂಸ್ಕೃತಿಯೂ ಅಲ್ಲ: ಡಿಸಿಎಂ ಡಿಕೆಗೆ ಮಾಜಿ ಸಿಎಂ HDK ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನದು ಧಮ್ಕಿ ಸಂಸ್ಕೃತಿಯಲ್ಲ, ಸೆಟ್ಲ್ ಮೆಂಟ್ ಮಾಡುವ ಸಂಸ್ಕೃತಿಯೂ ಅಲ್ಲ: ಡಿಸಿಎಂ ಡಿಕೆಗೆ ಮಾಜಿ ಸಿಎಂ HDK ತಿರುಗೇಟು

ಬೆಂಗಳೂರು: ನನ್ನದು ಧಮ್ಕಿ ಸಂಸ್ಕೃತಿಯಲ್ಲ, ಸೆಟ್ಲ್ ಮೆಂಟ್ ಮಾಡುವ ಸಂಸ್ಕೃತಿಯೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರಿಗೆ ಕುಮಾರಸ್ವಾಮಿ ಧಮಕಿ ಹಾಕುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು? ಸೆಟ್ಲ್ ಮೆಂಟ್ ಮಾಡುವುದಾಗಿ ಹೇಳಿದವರು ಯಾರು? ಧಮ್ಕಿ ಹಾಕಿ ಸಿಕ್ಕ ಸಿಕ್ಕ ಜಾಗದಲ್ಲಿ ಬೇಲಿ ಹಾಕುವುದು ನಮ್ಮ ಜಾಯಮಾನವಲ್ಲ ಎಂದು ತಿರುಗೇಟು ನೀಡಿದ್ದಾರೆ.

ನನ್ನದು ಧಮ್ಕಿ ಸಂಸ್ಕೃತಿಯಲ್ಲ, ಸೆಟ್ಲ್ ಮೆಂಟ್ ಮಾಡುವ ಸಂಸ್ಕೃತಿಯೂ ಅಲ್ಲ. ರಾಜ್ಯಸಭೆ ಚುನಾವಣೆ ನಡೆದಿದ್ದು, ಆತ್ಮಸಾಕ್ಷಿಯ ಮತ ಕೇಳುವುದಾಗಿ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...