alex Certify ‘ದೀಪಾವಳಿ’ ಗೆ ಮನೆ ಶುಚಿಗೊಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ…! ಶಾಕಿಂಗ್ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೀಪಾವಳಿ’ ಗೆ ಮನೆ ಶುಚಿಗೊಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ…! ಶಾಕಿಂಗ್ ವಿಡಿಯೋ ವೈರಲ್​

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ‘ದೀಪಾವಳಿ ಕಿ ಸಫಾಯಿ’ ಮಾಡುವಲ್ಲಿ ಹಲವರು ತೊಡಗುವುದು ಸಾಮಾನ್ಯ. ಅದರಲ್ಲಿಯೂ ‘ಲಕ್ಷ್ಮಿ ಪೂಜೆ’ ಇನ್ನೇನು ಹತ್ತಿರದಲ್ಲಿಯೇ ಇದೆ. ಆದ್ದರಿಂದ ಮಹಿಳೆಯರು ತಮ್ಮ ಮನೆ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗುತ್ತಾರೆ.

ಆದರೆ ಇಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಹಿಳೆಯೊಬ್ಬರು ಮಾಡುತ್ತಿರುವ ಶುಚಿ ಕಾರ್ಯ ಮಾತ್ರ ದಂಗು ಬಡಿಸುವಂತಿದೆ. ತನ್ನ 4 ನೇ ಮಹಡಿಯ ಫ್ಲಾಟ್‌ನ ಅಂಚಿನಲ್ಲಿ ಕಿಟಕಿಯ ಹೊರಗೆ ನಿಂತುಕೊಂಡಿರುವ ಮಹಿಳೆ ಅಲ್ಲಿ ಕಿಟಕಿಯ ಗಾಜನ್ನು ಒರೆಸುತ್ತಿರುವ ವಿಡಿಯೋ ಇದಾಗಿದ್ದು, ನೋಡಿದರೆ ಆತಂಕ ಸೃಷ್ಟಿಸುವಂತಿದೆ.

ಕಿಟಕಿಯು ಕಿರಿದಾದ ಹಲಗೆಯನ್ನು ಹೊಂದಿದ್ದು, ಮಹಿಳೆ ಆಕೆಯ ಪಾದಗಳನ್ನು ಇಡಲು ಬಾಲ್ಕನಿ ಅಥವಾ ಪ್ಯಾರಪೆಟ್ ಕೂಡ ಇಲ್ಲ. ಗ್ಲಾಸ್ ಕ್ಲೀನ್ ಮಾಡಲು ಆಕೆ ತನ್ನ ಪ್ರಾಣವನ್ನೇ ಏಕೆ ಪಣಕ್ಕಿಟ್ಟಿದ್ದಾಳೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಇದನ್ನು ನೋಡಿದವರೊಬ್ಬರು ವಿಡಿಯೋ ಮಾಡಿಕೊಂಡು ಅದನ್ನು ಶೇರ್​ ಮಾಡಿದ್ದಾರೆ.

ಇಂದಿರಾಪುರಂ ನಿವಾಸಿ ಶ್ರುತಿ ಠಾಕೂರ್ ಅವರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಸಾಹಸ ಪ್ರದರ್ಶಿಸುತ್ತಿರುವ ಮಹಿಳೆಯನ್ನು ಶಾಹಿದಾಲ್ ಎಂದು ಗುರುತಿಸಲಾಗಿದೆ. ದಯವಿಟ್ಟು ಯಾರೂ ಈ ರಿಸ್ಕ್​ ತೆಗೆದುಕೊಳ್ಳಬೇಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...