alex Certify 2 ವರ್ಷದಲ್ಲಿ 5 ಉಸ್ತುವಾರಿ ಸಚಿವರ ಬದಲಾವಣೆ: ಸರ್ಕಾರದ ವಿರುದ್ಧ ಶಾಸಕ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ವರ್ಷದಲ್ಲಿ 5 ಉಸ್ತುವಾರಿ ಸಚಿವರ ಬದಲಾವಣೆ: ಸರ್ಕಾರದ ವಿರುದ್ಧ ಶಾಸಕ ಆಕ್ರೋಶ

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಶಾಸಕ ಬಸನಗೌಡ ದದ್ದಲ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎರಡು ವರ್ಷದಲ್ಲಿ ಐವರು ಸಚಿವರ ಬದಲಾವಣೆ ಮಾಡಲಾಗಿದೆ. ಸರ್ಕಾರದ ಇಂತಹ ಧೋರಣೆಗಳಿಂದಾಗಿ ರಾಯಚೂರು ಜಿಲ್ಲೆ ಹಿಂದುಳಿದಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದಲೇ ರಾಯಚೂರು ಜಿಲ್ಲೆ ಹಿಂದುಳಿಯುವಂತಾಗಿದೆ. ಎರಡು ವರ್ಷದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಿ. ಶ್ರೀರಾಮುಲು, ಲಕ್ಷ್ಮಣ ಸವದಿ, ವಿ. ಸೋಮಣ್ಣ, ಹಾಲಪ್ಪ ಆಚಾರ್ ಅವರನ್ನು ನೇಮಿಸಿದ್ದು, ಈಗ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ನೇಮಕ ಮಾಡಲಾಗಿದೆ. ಕೇವಲ ನಾಲ್ಕು ತಿಂಗಳಲ್ಲೇ ಹಾಲಪ್ಪ ಆಚಾರ್ ಅವರನ್ನು ಬದಲಾವಣೆ ಮಾಡಲಾಗಿದೆ. ಕೆಡಿಪಿ ಸಭೆಗಳು ನಡೆಯದೆ ಅಭಿವೃದ್ಧಿ ಕಾರ್ಯಗಳು ಹಿಂದುಳಿದಿವೆ ಎಂದು ಬಸನಗೌಡ ದದ್ದಲ್ ಬೇಸರ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...