alex Certify ಅಂಗವಿಕಲತೆ ಮೆಟ್ಟಿ ನಿಂತು ನದಿಯಲ್ಲಿ ಈಜಿ ಸಾಧನೆಗೈದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗವಿಕಲತೆ ಮೆಟ್ಟಿ ನಿಂತು ನದಿಯಲ್ಲಿ ಈಜಿ ಸಾಧನೆಗೈದ ಯುವಕ

ಹೌದು, ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕೊರಗು ಇದ್ದೇ ಇರುತ್ತದೆ. ದೈಹಿಕ ನ್ಯೂನ್ಯತೆ, ಮಾನಸಿಕ ಖಿನ್ನತೆ, ಸಾಂಸಾರಿಕ ತಾಪತ್ರಯ, ಸಾಮಾಜಿಕ ಅಗೌರವ, ಆರ್ಥಿಕ ಮುಗ್ಗಟ್ಟು, ಸತತ ಸೋಲು, ಕೈಹಿಡಿಯದ ಕೆಲಸಗಳಿಂದ ಆತ್ಮವಿಶ್ವಾದ ಕೊರತೆಯಂತಹ ಸಾಲು ಸಾಲು ಸಮಸ್ಯೆಗಳಲ್ಲಿ ಜನರು ಮುಳುಗಿದ್ದಾರೆ. ಆದರೆ, 15 ವರ್ಷದ ಬಾಲಕನೊಬ್ಬ ತನ್ನ ಅಂಗವೈಕಲ್ಯವನ್ನು ಮೀರಿ ಸಾಧನೆಗೈದಿದ್ದಾನೆ.

ಕೇರಳದಲ್ಲೇ ಅತ್ಯಂತ ಉದ್ದನೆಯ ನದಿ ಎಂಬ ಖ್ಯಾತಿಯ ಪೆರಿಯಾರ್‌ ನದಿಯ ಕೊಚ್ಚಿಯ ಭಾಗದ ನೀರಿನಲ್ಲಿ ಅಂಗವಿಕಲ ಯುವಕ ಮೊಹಮ್ಮದ್‌ ಅಜೀಮ್‌ ಧೈರ್ಯವಾಗಿ ಈಜಾಡಿದ್ದಾನೆ. ಎರಡೂ ಕೈಗಳಿಲ್ಲದ ಈತ ನದಿಯಲ್ಲಿ ಗಂಟೆಗಟ್ಟಲೆ ತೇಲಾಡಿದ್ದಾನೆ. ಇದನ್ನು ನೂರಾರು ಮಂದಿ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

ನಿಬ್ಬೆರಗಾಗಿಸುತ್ತೆ ಪುಟಾಣಿ ಈಜುಪಟುಗಳ ಈ ಸಾಹಸ

ಅಜೀಮ್‌ಗೆ ಈ ಸಾಧನೆಗೆ ತರಬೇತಿ ಕೊಟ್ಟವರು ಸಾಜಿ ವಲಸ್ಸೆರಿ ಅವರು. ಎರಡು ವಾರಗಳ ಕಾಲ ಅಜೀಮ್‌ ತನ್ನ ತರಬೇತುದಾರರ ಮನೆಯಲ್ಲೇ ಇದ್ದುಕೊಂಡು ಸಮೀಪದ ನದಿಯಲ್ಲಿ ಈಜಾಡಿ ಸಾಧನೆಗೆ ಸಿದ್ಧತೆ ಮಾಡಿದ್ದಾನೆ. ಕೋಯಿಕ್ಕೋಡ್‌ನ ಅಳುವಾದ ಬಳಿಯ ರೈಲ್ವೆ ಸೇತುವೆ ಕೆಳಗೆ ಅಜೀಮ್‌ಗೆ ದಿನನಿತ್ಯ ಗಂಟೆಗಟ್ಟಲೆ ಈಜಾಡುವ, ತೇಲುವ ತರಬೇತಿಯನ್ನು ಸಾಜಿ ಕೊಟ್ಟಿದ್ದಾರೆ.

2020 ರಲ್ಲಿ 11 ವರ್ಷದ ಅಂಧ ಬಾಲಕ ಮನೋಜ್‌ಗೆ ತರಬೇತಿ ನೀಡಿದ್ದ ಸಾಜಿ ಅವರು, 600 ಮೀಟರ್‌ವರೆಗೆ ಮನೋಜ್‌ನನ್ನು ಪೆರಿಯಾರ್‌ ನದಿಯಲ್ಲಿ ಈಜಾಡಿಸಿದ್ದರು. ಕೇವಲ 30 ನಿಮಿಷಗಳಲ್ಲಿ ಮನೋಜ್‌ ಆರಾಮಾಗಿ ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಈಜಿದ್ದ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...