alex Certify ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ ದಂಡು ಟಿಕೆಟ್ ಖರೀದಿಗೆ ಪೈಪೋಟಿ ನಡೆಸುತ್ತಿದೆ.

ಈ ಬಹುನಿರೀಕ್ಷಿತ ಚಿತ್ರವು ಜೂನ್ 3 ರಂದು ತೆರೆ ಕಾಣಲಿದ್ದು, ಇದರಲ್ಲಿ ಕಮಲಹಾಸನ್, ವಿಜಯ್ ಸೇತುಪತಿ ಮತ್ತು ಫಹಾದ್ ಫಜೀಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕಮಲಹಾಸನ್ ರ ಪಕ್ಕಾ ಅಭಿಮಾನಿಗಳು ಈಗಾಗಲೇ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಟಿಕೆಟ್ ಗಳನ್ನು ಖರೀದಿ ಮಾಡಿ ಮೊದಲ ದಿನ ಮೊದಲ ಶೋ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಇಲ್ಲೊಬ್ಬ ಹುಚ್ಚು ಅಭಿಮಾನಿಯೊಬ್ಬ ಬರೋಬ್ಬರಿ 60 ಟಿಕೆಟ್ ಗಳನ್ನು ತನ್ನೆದೆಯ ಮೇಲೆ ಹಾಕಿಕೊಂಡು ಹಾಸಿಗೆಯಲ್ಲಿ ಮಲಗಿ ಫೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗತೊಡಗಿದೆ.

ಇದೇ ಮಾದರಿಯ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಚೆನ್ನೈನ ರೋಹಿಣಿ ಸಿಲ್ವರ್ ಸ್ಕ್ರೀನ್ ಮುಂದೆ ತಮ್ಮ ಟಿಕೆಟ್ ಖರೀದಿಸಲು ಸಾವಿರಾರು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಈ ವಿಡಿಯೋವನ್ನು 75,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರೆ, 4000 ಲೈಕ್ ಗಳು ಬಂದಿವೆ.
ಈ ದೃಶ್ಯವನ್ನು ವೀಕ್ಷಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, ಈ ಚಿತ್ರದ ಮೇಲಿನ ಕ್ರೇಜ್ ವಿಭಿನ್ನ ಹಂತಕ್ಕೆ ತಲುಪಿದೆ ಎಂದು ಉದ್ಘಾರ ತೆಗೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...