alex Certify ತಡೆಯಲಾಗದಷ್ಟು ನಿದ್ರೆ ಬಂದಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ ? ಶಾಕ್‌ ಆಗುವಂತಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡೆಯಲಾಗದಷ್ಟು ನಿದ್ರೆ ಬಂದಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ ? ಶಾಕ್‌ ಆಗುವಂತಿದೆ ವಿಡಿಯೋ

ಮನೆಗೆ ಅನಿರೀ‌ಕ್ಷಿತ ಅತಿಥಿಗಳು ಬರುವುದು ಒಮ್ಮೊಮ್ಮೆ ಭಾರೀ ಪ್ರಯಾಸದ ಅನುಭವವಾಗಿ ಬಿಡುತ್ತದೆ. ಆದರೆ ನೀವು ಅಪರಿಚಿತರೊಬ್ಬರು ನಿಮ್ಮ ಕೌಚ್‌ ಮೇಲೆ ಮಲಗಿರುವುದನ್ನು ನೋಡಿದರೆ ನಿಮಗೆ ಏನನಿಸಬೇಡ?

ಆಸ್ಟ್ರೇಲಿಯಾದ ಈ ಕುಟುಂಬಕ್ಕೆ ಇಂಥದ್ದೇ ಅನುಭವವಾಗಿದೆ. ತಮ್ಮ ಮನೆಯ ಕೌಚ್‌ನಲ್ಲಿ ಅಪರಿಚಿತನೊಬ್ಬ ವಿಶ್ರಮಿಸುತ್ತಿರುವುದನ್ನು ಕಂಡ ಈ ಕುಟುಂಬಕ್ಕೆ ದಂಗು ಬಡಿದಂತಾಗಿದೆ. ಶನಿವಾರ ರಾತ್ರಿ ಜಾಲಿಯಾಗಿ ಮನೆಗೆ ಬಂದು ಮಲಗಿ ಭಾನುವಾರ ಬೆಳಿಗ್ಗೆ ಎದ್ದ ಕುಟುಂಬಕ್ಕೆ ಆಹ್ವಾನವೇ ಇಲ್ಲದ ಅಪರಿಚಿತರೊಬ್ಬರು ಸೋಫಾ ಮೇಲೆ ಬಂದು ಮಲಗಿರುವುದನ್ನು ಕಂಡು ಬೆಕ್ಕಸ ಬೆರಗಾಗಿದೆ.

ಕೂಮೆರಾ ಎಂಬ ಊರಿನಲ್ಲಿರುವ ಈ ಮನೆಯಲ್ಲಿ ಆದ ಈ ವಿಚಿತ್ರ ಘಟನೆಯ ವಿಡಿಯೋವನ್ನು ಸೆರೆ ಹಿಡಿದ ಕುಟುಂಬ ಅದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದೆ. “ಎಂಥ ಅಪರಿಚಿತ ಅಚ್ಚರಿ! ತಮ್ಮ ಮನೆಯಲ್ಲಿ ಅಪರಿಚಿತನೊಬ್ಬ ಮಲಗಿರುವುದನ್ನು ಕಂಡ ಕೂಮೆರಾ ಕುಟುಂಬಕ್ಕೆ ವಾರಾಂತ್ಯದ ಶಾಕ್‌ ಆಗಿದೆ. ನಿದ್ರೆ ಮಾಡುವ ಮುನ್ನ ಈ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿ ಬಂದಿದ್ದಾರೆ ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ,” ಎಂದು 9ನ್ಯೂಸ್ ಗೋಲ್ಡ್ ಕೋಸ್ಟ್ ತಿಳಿಸಿದೆ.

ಈ ವಿಡಿಯೋವನ್ನು ಕಂಡ ನೆಟ್ಟಿಗರು ಕುಟುಂಬದ ಮಂದಿಗೆ ಭಾರೀ ಫನ್ನಿ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...