ಸಾಮಾಜಿಕ ಜಾಲತಾಣಿಗರಿಗೆ ಡಿಂಚಕ್ ಪೂಜಾ ಅಪರಿಚಿತಳೇನಲ್ಲ. “ಸೆಲ್ಫಿ ಮೈ ನೇ ಲೇ ಲೀ ಆಜ್…..” ಎಂಬ ಹಾಡಿನೊಂದಿಗೆ ಸೂಪರ್ ವೈರಲ್ ಆಗಿದ್ದ ಪೂಜಾ, ಬಿಗ್ ಬಾಸ್ 11 ರಲ್ಲೂ ಭಾಗಿಯಾಗಿದ್ದರು. 2020 ರಲ್ಲಿ ಕೋವಿಡ್ಗೆ ಸಂಬಂಧಿಸಿದ ‘ಸ್ವಾಗ್ ವಾಲಿ ಟೋಪಿ’ ಮತ್ತು ‘ದಿಲೋನ್ ಕಾ ಶೂಟರ್’ ನಂತಹ ಹಲವಾರು ಹಾಡುಗಳೊಂದಿಗೆ ಕಾಣಿಸಿಕೊಂಡಿದ್ದರು. ಕಳೆದ ತಿಂಗಳು, ‘ಏಕ್ ಔರ್ ಸೆಲ್ಫಿ ಲೆನೆ ದೋ’ ಎಂಬ ಹೊಸ ಟ್ರ್ಯಾಕ್ ಬಿಟ್ಟು ಹೆಚ್ಚು ಟ್ರೋಲ್ಗೆ ಒಳಗಾದರು.
ಈಗ, ವೈರಲ್ ರಾಪರ್, ರಾಪ್ ಗಾಡ್ ಅಮೆರಿಕದ ಎಮಿನೆಮ್ ಅವರ ಸೂಪರ್ ಹಿಟ್ ಹಾಡನ್ನು ಮರುಸೃಷ್ಟಿಸಿದ್ದಾರೆ. ಈ ಹಾಡನ್ನು ಅಕ್ಷರಶಃ ಭಾಷಾಂತರಿಸಿದ್ದಾರೆ. ಎಮಿನೆಮ್ ಅವರ “ಲೂಸ್ ಯುವರ್ ಸೆಲ್ಫ್” ಹಾಡು ಯೂಟ್ಯೂಬ್ನಲ್ಲಿ 1.2 ಬಿಲಿಯನ್ಗೂ ಅಧಿಕ ವೀಕ್ಷಣೆ ಹೊಂದಿದೆ. ಈ ಹಾಡು 8 ಮೈಲ್ ಸಿನಿಮಾದಲ್ಲಿ ಅಳವಡಿಕೆಯಾಗಿತ್ತು. ಗಲ್ಲಿ ಬಾಯ್ ಸಿನಿಮಾಕ್ಕೆ ಇದೇ ಸಿನಿಮಾ ಪ್ರೇರಣೆಯಾಗಿತ್ತು.
‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು…?
ಯೂಟ್ಯೂಬರ್ 8 ಮೈಲ್ನ ಸಂಪೂರ್ಣ ಸಂಗೀತ ವಿಡಿಯೋವನ್ನು ಮರುಸೃಷ್ಟಿಸಿದ್ದು, ಅದು ಅವಳನ್ನು ಎಮಿನೆಮ್ ರೀತಿಯಲ್ಲೇ ಬಿಂಬಿಸುವಂತಿದೆ. ಡಿಂಚಕ್ ಪೂಜಾ “ಲೂಸ್ ಯುವರ್ ಸೆಲ್ಫ್” ಹಾಡು ಜೂ.10ಕ್ಕೆ ಯೂಟ್ಯೂಬ್ಗೆ ಅಪ್ಲೋಡ್ ಆಗಿದ್ದು, 1.21 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹೊಂದಿದೆ. ಈಗ ಡಿಂಚಕ್ ಪೂಜಾ ಹೀಗೆ ಕೂಗ್ತಾಳೆ – “ಎಯ್ತ್ ಮೀಲ್.. ಡಿಂಚಕ್ ಪೂಜಾ ಇನ್ ಘರ್!”
ಡಿಂಚಕ್ ಪೂಜಾರ ಹೊಸ ವಿಡಿಯೊ ನೆಟ್ಟಿಗರ ನಡುವೆ ಸಂಚಲನ ಮೂಡಿಸಿದೆ. ಲೂಸ್ ಯುವರ್ಸೆಲ್ಫ್ ಮಾದರಿಯ ಸಾಂಪ್ರದಾಯಿಕ ಹಾಡನ್ನು ಮರುಸೃಷ್ಟಿಸಲು ಅವರಿಗೆ ಅದ್ಭುತ ಆತ್ಮವಿಶ್ವಾಸ ಬೇಕು ಎಂದಿದ್ದಾರೆ. ಎಂದಿನಂತೆ, ಯೂಟ್ಯೂಬ್ನಲ್ಲಿ ಪೂಜಾ ಕಾಮೆಂಟ್ಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ, ಹಾಡು ಟ್ವಿಟರ್ನಲ್ಲಿ ಟ್ರೋಲ್ ಆಗುತ್ತಿದೆ. ಅವರು ‘ಕ್ರಿಂಜ್ ಕ್ವೀನ್’ ಶೀರ್ಷಿಕೆಯನ್ನು ಮರುಪಡೆದಿದ್ದಾರೆ ಎಂಬಿತ್ಯಾದಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.