alex Certify ಬಹು ದಿನಗಳ ಬಳಿಕ ಬೈಕ್‌ ಏರಿ ಮತ್ತೆ ಬಂದ ಡಿಂಚಕ್‌ ಪೂಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹು ದಿನಗಳ ಬಳಿಕ ಬೈಕ್‌ ಏರಿ ಮತ್ತೆ ಬಂದ ಡಿಂಚಕ್‌ ಪೂಜಾ

ತನ್ನ ’ಡಿಲ್ಲೋನ್ ಕಾ ಶೂಟರ್‌ ಹೈಂ ಮೇರಾ ಸ್ಕೂಟರ್‌’ಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತಳಾಗಿರುವ ಡಿಂಚಕ್‌ ಪೂಜಾ ಇದೀಗ ಹೊಸ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.

’ಐ ಆಮ್ ಎ ಬೈಕರ್‌’ ಹೆಸರಿನ ಈ ಮ್ಯೂಸಿಕ್ ವಿಡಿಯೋದಲ್ಲಿ ಪೂಜಾ ಹೆಲ್ಮೆಟ್ ಇಲ್ಲದೇ, ಹಾಡು ಹೇಳಿಕೊಂಡು ಬೈಕ್ ರೈಡ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಹರಾಜಿನಲ್ಲಿ ಲ್ಯಾಂಡ್‌ ರೋವರ್‌ ನ ವಿಂಟೇಜ್ ಕಾರು ಗೆದ್ದ ಧೋನಿ

ಜನವರಿ 15ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡಿನಲ್ಲಿ ಪೂಜಾ ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದು, “ಐ ಆಮ್ ಬೈಕರ್‌, ಜೈಸೆ ಕೋಯಿ ಟೈಗರ್‌, ಮೋಟೆ ಥೋಡಾ ಡತೆಟ್ ಕರ್‌, ತೂ ಭಿ ಮುಜ಼ೆ ಲೈಕ್ ಕರ್‌‌, ಸ್ಕೂಟಿ ಥೋಡಿ ಸೈಡ್ ಕರ್‌, ಫೇಸ್ ಕೋ ಅಪ್ನೇ ಹೈಡ್ ಕರ್‌, ದಿಮ್ ಥೋಡಿ ಲೈಟ್ ಕರ್‌” ಎಂದುಕೊಂಡು ಹಾಡುತ್ತಿರುವುದನ್ನು ನೋಡಬಹುದಾಗಿದೆ. ಈ ಹಾಡಿನ ವಿಡಿಯೋಗೆ ಪೂಜಾ ಕಾಮೆಂಟ್‌ ಸೆಕ್ಷನ್‌ ಅನ್ನು ಆಫ್ ಮಾಡಿದ್ದಾರೆ.

ಡಿಂಚಕ್‌ ಪೂಜಾ ಎಂದು ಜನಪ್ರಿಯಳಾಗಿರುವ ಪೂಜಾ ಜೈನ್, 2017ರಲ್ಲಿ ತಮ್ಮ ರ‍್ಯಾಪ್ ಹಾಡು, ’ಡಿಲ್ಲೋನ್ ಕಾ ಶೂಟರ್‌’, ’ಸ್ವಾಗ್ ವಾಲಿ ಟೋಪಿ’ ಮತ್ತು ’ಸೆಲ್ಫೀ ಮೇಂ ಲೇಲಿ ಆಜ್’ ಹಾಡುಗಳ ಮೂಲಕ ಭಾರೀ ಜನಪ್ರಿಯತೆ ಗಿಟ್ಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...