alex Certify ದೀಪಾವಳಿಗೆ ʼಫೋನ್ ಪೇʼ ನಿಂದ ಭರ್ಜರಿ ಆಫರ್: 1,000 ರೂ. ಮೌಲ್ಯದ ಚಿನ್ನ ಖರೀದಿಗೆ 3,000 ರೂ. ಕ್ಯಾಶ್​ಬ್ಯಾಕ್….​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಗೆ ʼಫೋನ್ ಪೇʼ ನಿಂದ ಭರ್ಜರಿ ಆಫರ್: 1,000 ರೂ. ಮೌಲ್ಯದ ಚಿನ್ನ ಖರೀದಿಗೆ 3,000 ರೂ. ಕ್ಯಾಶ್​ಬ್ಯಾಕ್….​!

ಇಡೀ ದೇಶವೇ ದೀಪಾವಳಿ ಹಬ್ಬದ ಆಗಮನಕ್ಕಾಗಿ ಕಾಯುತ್ತಿದೆ. ಉತ್ತರ ಭಾರತದಲ್ಲಿ ಧನ್ತೇರಸ್​ ಹಬ್ಬವನ್ನು ಸಹ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಫೋನ್​ಪೇ 24 ಕ್ಯಾರೆಟ್​ ಚಿನ್ನದ ಖರೀದಿ ಮೇಲೆ ಕ್ಯಾಶ್​​ಬ್ಯಾಕ್​ ಘೋಷಣೆ ಮಾಡಿದೆ. ಫೋನ್​ಪೇನಿಂದ ಕನಿಷ್ಟ 1000 ರೂಪಾಯಿ ಮೌಲ್ಯದ ಚಿನ್ನ ಖರೀದಿ ಮಾಡುವ ಗ್ರಾಹಕರು 3000 ರೂಪಾಯಿಗಳವರೆಗೆ ಗ್ಯಾರಂಟಿ ಕ್ಯಾಶ್​ಬ್ಯಾಕ್​ ಪಡೆಯಲಿದ್ದಾರೆ.

ನವೆಂಬರ್​ 9ರಿಂದ 12ರವರೆಗೆ ನೀವು ಕನಿಷ್ಟ 1 ಸಾವಿರ ರೂಪಾಯಿ ಮೌಲ್ಯದ ಡಿಜಿಟಲ್​ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಪ್ರತಿ ಬಾರಿ ನೀವು ಚಿನ್ನ ಖರೀದಿ ಮಾಡಿದಾಗಲೂ ನಿಮಗೆ ಈ ಆಫರ್​ ಬಳಕೆ ಮಾಡುವ ಅವಕಾಶ ಪಡೆದುಕೊಳ್ಳಲಿದ್ದೀರಿ. ಬ್ಯಾಂಕ್​ ದರ್ಜೆಯ ಲಾಕರ್​ಗಳು ಐದು ವರ್ಷಗಳವರೆಗೆ ಉಚಿತವಾಗಿ ಇರಲಿದೆ.

PhonePe ನಲ್ಲಿ ಚಿನ್ನವನ್ನು ಖರೀದಿಸುವಾಗ ಈ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆಯುವ ಮಾರ್ಗ ಇಲ್ಲಿದೆ :

ಹಂತ 1 : ಫೋನ್​ಪೇ ಆ್ಯಪ್​ನ ಹೋಮ್​ಪೇಜ್​ನಲ್ಲಿರುವ ವೆಲ್ತ್​ ಆಯ್ಕೆಯನ್ನು ಕ್ಲಿಕ್​ ಮಾಡಿ

ಹಂತ 2 : ವೆಲ್ತ್​ ಪರದೆಯ ಮೇಲೆ ಇರುವ ಗೋಲ್ಡ್​ ಆಯ್ಕೆಯನ್ನು ಕ್ಲಿಕ್​ ಮಾಡಿ

ಹಂತ 3 : ಬೈ ವನ್​ ಟೈಂ ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ

ಹಂತ 4 : ಬೈ ಇನ್​ ರುಪೀಸ್​ ಆಯ್ಕೆಯನ್ನು ಕ್ಲಿಕ್​ ಮಾಡಿ. ಹಾಗೂ ಇಲ್ಲಿ ನೀವು ಕನಿಷ್ಟ 1000 ರೂಪಾಯಿಯನ್ನು ವಿನಿಯೋಗಿಸಲೇಬೇಕು.

ಹಂತ 5 : ನಿಮ್ಮ ಪೇಮೆಂಟ್​ ಪ್ರಕ್ರಿಯೆ ಪೂರ್ಣಗೊಳಿಸಿ.

ಝೀರೋ ಮೇಕಿಂಗ್​ ಚಾರ್ಜಸ್​ ಮೂಲಕ ನೀವು 24 ಕ್ಯಾರಟ್​​ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಹಾಗೂ ಈ ಪೇಮೆಂಟ್​ ಬಳಿಕ ನೀವು ಕ್ಯಾಶ್​ಬ್ಯಾಕ್​ ಸೌಕರ್ಯ ಪಡೆಯಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...