alex Certify ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ, ಹಾಡಹಗಲೇ ಬಲು ಕೂಲಾಗಿ ಮನೆಯ ಗೇಟು ತೆರೆದು ಅಂಗಳದೊಳಗೆ ಕಾಲಿಟ್ಟ ಕಳ್ಳ ವೆರಾಂಡಾ ಬಳಿ ನಿಲ್ಲಿಸಿದ್ದ ಬೈಸಿಕಲ್ ಮತ್ತು ಬೈಕ್‌ನತ್ತ ಹೆಜ್ಜೆಯಿಟ್ಟಿದ್ದಾನೆ. ಬೈಸಿಕಲ್‌ ಅನ್ನು ಕೈಯಲ್ಲಿ ಹಿಡಿದು ಗೇಟಿನತ್ತ ಸಾಗಿದ ಕಳ್ಳ ಮಾಲೀಕನ ಕಣ್ಣಿಗೆ ಬಿದ್ದಿದ್ದಾನೆ.

ಮಾಲೀಕ ಕೂಡಲೇ ಆತನನ್ನು ಚೇಸ್ ಮಾಡಿದ್ದಾರೆ. ಇದರಿಂದ ಮುಂದಿನದ್ದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಕಳ್ಳನನ್ನು ಮಾಲೀಕ ಬೆನ್ನಟ್ಟಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಈ ದೃಶ್ಯಕ್ಕೆ ಫನ್ನಿಯಾಗಿ ಕಾಣುವಂತೆ ಎಡಿಟಿಂಗ್ ಮಾಡಿ ಮೀಮ್ ಮಾಡಿ ಶೇರ್‌ ಮಾಡಲಾಗಿದೆ. ವಿಡಿಯೋ ದೇಶದ ಯಾವ ಮೂಲೆಯಲ್ಲಿ ರೆಕಾರ್ಡ್ ಆಗಿದೆ ಎಂದು ತಿಳಿದುಬಂದಿಲ್ಲ.

Desi Man Walks into House to Steal Cycle, What Happens Next Leaves Netizens in Splits

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...