alex Certify ‘ಚಿಕ್ನಿ ಚಮೇಲಿ` ಹಾಡಿಗೆ ಐರ್ಲೆಂಡ್ ಗೆಳತಿ ಜೊತೆ ಬಿಂದಾಸ್ ಸ್ಟೆಪ್ಸ್: ವಿಡಿಯೋ ನೋಡಿ ಎಂಜಾಯ್ ಮಾಡಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚಿಕ್ನಿ ಚಮೇಲಿ` ಹಾಡಿಗೆ ಐರ್ಲೆಂಡ್ ಗೆಳತಿ ಜೊತೆ ಬಿಂದಾಸ್ ಸ್ಟೆಪ್ಸ್: ವಿಡಿಯೋ ನೋಡಿ ಎಂಜಾಯ್ ಮಾಡಿದ ನೆಟ್ಟಿಗರು

ಬಾಲಿವುಡ್​​ನ ಸಾಂಗ್​ಗಳಿಗೆಫಿದಾ ಆಗದವರೇ ಯಾರೂ ಇಲ್ಲ. ಕೇವಲ ಭಾರತದಲ್ಲಿ ಮಾತ್ರ ಅಲ್ಲ ಪಾಕಿಸ್ತಾನ್ ಸೇರಿದಂತೆ ವಿದೇಶಗಳಲ್ಲೂ ಬಾಲಿವುಡ್ ಹಾಡಿಗೆ ಅಭಿಮಾನಿಗಳಿದ್ಧಾರೆ. ಅದರಲ್ಲೂ ಕೆಲ ಹಾಡುಗಳಂತೂ ಎವರ್ಗ್ರೀನ್ ಅನ್ನುವ ಹಾಗಿದೆ. ಅದರಲ್ಲಿ ಕೈಫ್ ಸೊಂಟ ಬಳುಕಿಸಿರೋ `ಚಿಕ್ನಿ ಚಮೇಲಿ` ಹಾಡು ಕೂಡಾ ಒಂದು.

2011ರಲ್ಲಿ ಬಿಡುಗಡೆಯಾದ `ಅಗ್ನಿಪಥ್` ಸಿನೆಮಾದ ಈ ಟ್ರೆಂಡ್ ಸೆಟರ್ ಹಾಡಿಗೆ ಬಿಂದಾಸ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಬಿಡುಗಡೆ ಆಗಿ 11 ವರ್ಷ ಆದರೂ ಈ ಹಾಡಿನ ಗುಂಗು ಇನ್ನೂ ಕಡಿಮೆ ಆಗಿಲ್ಲ. ಈಗ ಮತ್ತೆ ಈ ಹಾಡಿಗೆ ಸ್ಟೆಪ್ಸ್ ಹಾಕುವ ವಿಡಿಯೋಗಳು ಆಗಾಗ ವೈರಲ್ ಆಗ್ತಾನೆ ಇವೆ. ಈಗ ಮತ್ತೆ ಅಂತಹದ್ದೇ ಒಂದು ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಭಾರತೀಯ ಮೂಲದ ಯುವತಿಯೊಬ್ಬಳು, ತಮ್ಮ ಐರಿಶ್ ಸ್ನೇಹಿತೆಯೊಂದಿಗೆ ಇದೇ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಇವರ ಈ ಜೋಶ್​​ನ ನೃತ್ಯ ಎಲ್ಲರ ಗಮನ ಸೆಳೆಯುತ್ತಿದೆ. `ಚಿಕ್ನಿ ಚಮೇಲಿ` ನೃತ್ಯಕ್ಕೆ ನಟಿ ಕತ್ರಿನಾ ಕೈಫ್ ಹೇಗೆ ನೃತ್ಯ ಮಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದರೋ ಇವರು ಕೂಡ, ಅಷ್ಟೆ ಖುಷಿ-ಖುಷಿಯಾಗಿ ನೃತ್ಯ ಮಾಡುವ ಪರಿ ನೋಡಿ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

sahirataneja ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಬ್ಬರು ಯುವತಿಯರು ನೃತ್ಯ ಮಾಡುವ ದೃಶ್ಯ ಈ ಕ್ಲಿಪ್​​ನಲ್ಲಿದೆ. ಬೆಲ್ಜಿಯಂನಲ್ಲಿ ನೆಲೆಸಿರುವ ಭಾರತೀಯ ಯುವತಿಯೊಬ್ಬರು ಐರ್ಲೆಂಡ್​ನಿಂದ ಬಂದ ತನ್ನ ಸ್ನೇಹಿತೆಗೆ ಈ ಹಾಡಿನ ಪರಿಚಯ ಮಾಡಿದ್ದಾರೆ. ಜತೆಗೆ, ಇಬ್ಬರೂ ಉಲ್ಲಾಸಪೂರ್ಣವಾಗಿ ಈ ಹಾಡಿಗೆ ನೃತ್ಯ ಮಾಡುವ ಮೂಲಕ ಖುಷಿಪಟ್ಟಿದ್ದಾರೆ.

ಗೆಳೆತಿಯರ ಈ ಖುಷಿ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. `ನಾವು ತಪ್ಪು ತಪ್ಪಾಗಿ ಹೆಜ್ಜೆ ಹಾಕಿದ್ದರೂ ಎಂಜಾಯ್ ಮಾಡಿದ್ದೇವೆ` ಎಂಬ ಕ್ಯಾಪ್ಶನ್ ಕೊಟ್ಟು ಈ ವಿಡಿಯೋವನ್ನ ಅಪ್ಲೋಡ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...