alex Certify ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಸಲಿಂಗಿ ಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಸಲಿಂಗಿ ಜೋಡಿ..!

ಸುಪ್ರೀಂ ಕೋರ್ಟ್​ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದ್ದರೂ ಸಹ ದೇಶದಲ್ಲಿನ ಬಹುತೇಕರು ಈಗಲೂ ಕೂಡ ಈ ರೀತಿಯ ಸಂಬಂಧಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಎಲ್ಲ ವಾದ – ವಿವಾದಗಳ ನಡುವೆಯೇ ತೆಲಂಗಾಣದಲ್ಲಿ ಇಬ್ಬರು ಸಲಿಂಗ ಕಾಮಿಗಳು ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮ 8 ವರ್ಷಗಳ ಸಂಬಂಧವನ್ನು ಸಂಭ್ರಮಿಸಿದ್ದಾರೆ.

ಸುಪ್ರಿಯೋ ಚಕ್ರವರ್ತಿ ಹಾಗೂ ಅಭಯ್​ ಕಳೆದ 8 ವರ್ಷಗಳಿಂದ ಸಲಿಂಗ ಕಾಮಿ ಸಂಬಂಧದಲ್ಲಿದ್ದಾರೆ. ತಮ್ಮ 8 ವರ್ಷಗಳ ಸಂಬಂಧದ ಸಂಭ್ರಮವನ್ನು ಆಚರಿಸುವ ಸಲುವಾಗಿ ಈ ದಂಪತಿ ಸಣ್ಣ ಔತಣಕೂಟವನ್ನು ಆಯೋಜಿಸಿದೆ. ಈ ಔತಣಕೂಟದ ಮೂಲಕ ಈ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ಹೋಟೆಲ್​ ಮ್ಯಾನೇಜ್​ಮೆಂಟ್​ ಇನ್​ಸ್ಟಿಟ್ಯೂಟ್​​ನ ಸಿಬ್ಬಂದಿಯಾಗಿರುವ ಚಕ್ರವರ್ತಿ 8 ವರ್ಷಗಳ ಹಿಂದೆ ಆನ್​​ಲೈನ್​ ಡೇಟಿಂಗ್​ ಆ್ಯಪ್​ ಮೂಲಕ ಅಭಯ್​​ರನ್ನು ಕಂಡುಕೊಂಡಿದ್ದರು. ಸಾಕಷ್ಟು ಏರಿಳಿತಗಳ ಬಳಿಕ ಇವರ ಕುಟುಂಬಸ್ಥರೂ ಕೂಡ ಈ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ನಮ್ಮ ಸಮುದಾಯದ ಸಂಭ್ರಮವನ್ನು ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸಂಭ್ರಮಿಸಬೇಕು ಎಂಬುವುದೇ ನಮ್ಮ ಆಶಯವಾಗಿತ್ತು. ನಾವು ಕೂಡ ಉಂಗುರು ಬದಲಾಯಿಸಿಕೊಂಡು , ಒಟ್ಟಿಗೆ ಇರುವ ಪ್ರಮಾಣ ಮಾಡುವುದು, ಕೇಕ್​ ಕಟ್ಟಿಂಗ್​ ಸೇರಿದಂತೆ ಕೆಲ ವೈವಾಹಿಕ ರೀತಿಯ ಶಾಸ್ತ್ರಗಳನ್ನು ಮಾಡಿದ್ದೇವೆ. ನಾವಿಬ್ಬರೂ ಜೊತೆಯಾಗಿ ಇರೋದು ನಿಜಕ್ಕೂ ನಮಗೆ ಸಂತಸದ ವಿಚಾರವಾಗಿದೆ. ಇದೇ ಕಾರಣಕ್ಕೆ ನಾವು ಈ ಔತಣಕೂಟ ಆಯೋಜಿಸಿದ್ದೆವು ಎಂದು ಚಕ್ರವರ್ತಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...