alex Certify 9/11 ದುರಂತದ ವೇಳೆ ಪ್ರಾಣ ಉಳಿಸಿದಾತನ ನೆನಪಿಸಿಕೊಂಡ ಟ್ವೀಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9/11 ದುರಂತದ ವೇಳೆ ಪ್ರಾಣ ಉಳಿಸಿದಾತನ ನೆನಪಿಸಿಕೊಂಡ ಟ್ವೀಟಿಗರು

2001ರ ಸೆಪ್ಟೆಂಬರ್‌ 11, ಬಹುಶಃ ಈ ದಿನವನ್ನು ಜಗತ್ತಿನ ಇತಿಹಾಸದ ಅತ್ಯಂತ ಕರಾಳ ದಿನಗಳಲ್ಲಿ ಒಂದು ಎಂದೇ ಕರೆಯಬಹುದು.

ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಪಾಕಿಸ್ತಾನ ಪೋಷಿತ ಉಗ್ರ ಒಸಾಮ ಬಿನ್‌ ಲಾಡೆನ್‌ ನಡೆಸಿದ್ದ ವೈಮಾನಿಕ ದಾಳಿಗೆ ಬಲಿಯಾದವರು ಮೂರು ಸಾವಿರ ಮಂದಿ. ಇನ್ನು ಗಾಯಗೊಂಡವರ ಸಂಖ್ಯೆ ಕೂಡ ಕಡಿಮೆ ಇಲ್ಲ, ಬರೋಬ್ಬರಿ 25 ಸಾವಿರ ಮಂದಿ.

ನ್ಯೂಯಾರ್ಕ್‌ ನಗರದ ಮೇಲೆ ಅಲ್‌ ಕೈದಾ ಉಗ್ರರು ನಡೆಸಿದ ಈ ದಾಳಿಯ ವೇಳೆ ಏಳು ಜನರನ್ನು ಅಮೆರಿಕದ ಪ್ರಜೆಯೊಬ್ಬರು ಕರ್ತವ್ಯದ ಮಾದರಿಯಲ್ಲಿ ಪ್ರಾಣ ಒತ್ತೆ ಇಟ್ಟು ರಕ್ಷಿಸಿದ್ದರು.

ಡೆನ್ವರ್‌ ನಿವಾಸಿಯೊಬ್ಬರು ಒಹಿಯೊಗೆ ಬ್ಯುಸಿನೆಸ್‌ ಟ್ರಿಪ್‌ ಮೇಲೆ ಹೊರಟಿದ್ದರು, ದಾಳಿ ವೇಳೆ ಏರ್‌ಪೋರ್ಟ್‌ನಿಂದ ವ್ಯಾನ್‌ವೊಂದನ್ನು ತಂದು, ದಾಳಿಯ ಸ್ಥಳದಲ್ಲಿ ಕಂಗಾಲಾಗಿ ನಿಂತಿದ್ದ ಸುಮಾರು ಏಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಪ್ರಾಣರಕ್ಷಣೆ ಮಾಡಿದ್ದರು.

BIG NEWS: ಸೆ.27ಕ್ಕೆ ಕರ್ನಾಟಕ ಬಂದ್; ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಮುಂದಾದ ಅನ್ನದಾತರು

ಆದರೆ ವಿಷಯ ಅದಲ್ಲ, 20 ವರ್ಷಗಳ ತರುವಾಯ ಆತನ ಮಗಳು ’ಮರ್ಸಿಡಿಸ್‌ ಮಾರ್ಟಿನಿಜ್‌’ ಟ್ವಿಟರ್‌ನಲ್ಲಿ ತಮ್ಮ ತಂದೆಯಿಂದ ರಕ್ಷಿಸಲ್ಪಟ್ಟವರ ಕುಶಲೋಪರಿ ವಿಚಾರಿಸಿದ್ದಾರೆ.

2016ರಲ್ಲಿ ಮಿದುಳಿನ ಕ್ಯಾನ್ಸರ್‌ನಿಂದ ರಕ್ಷಕ ವ್ಯಕ್ತಿ ಮೃತಪಟ್ಟರೂ ಕೂಡ ರಕ್ಷಣೆ ಪಡೆದವರು ನೇರವಾಗಿ ಅವರೊಂದಿಗೆ ಪ್ರತಿ ವರ್ಷ ಸಂಪರ್ಕದಲ್ಲಿದ್ದರಂತೆ. ಬಳಿಕ ಸಂಪರ್ಕ ಕಡಿತಗೊಂಡಿತ್ತು.

ಹಾಗಾಗಿ ರಕ್ಷಕನ ಮಗಳು ಮರ್ಸಿಡಿಸ್‌, ತಮ್ಮ ಟ್ವಿಟರ್‌ ಖಾತೆಯಲ್ಲಿ ತಂದೆಯ ಸೇವೆಯನ್ನು ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ಟ್ವೀಟಿಗರು ರಕ್ಷಕನನ್ನು ’ಹೀರೋ’ ಎಂದು ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...