alex Certify ಹಲ್ಲು ಕೀಳುವ ನೆಪದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರಗೈದ ಪಾಪಿ ದಂತವೈದ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲು ಕೀಳುವ ನೆಪದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರಗೈದ ಪಾಪಿ ದಂತವೈದ್ಯ…..!

ವೈದ್ಯೋ ನಾರಾಯಣೋ ಹರಿಃ ಅಂತಾರೆ. ಆದರೆ ಇಲ್ಲೊಬ್ಬ ದಂತ ವೈದ್ಯ ಮಾತ್ರ ಈ ಮಾತಿಗೆ ವಿರುದ್ಧವಾಗಿ ವರ್ತಿಸಿದ್ದಾನೆ.

ಹಲ್ಲು ನೋವೆಂದು ಕ್ಲಿನಿಕ್​ಗೆ ಬಂದಿದ್ದ 32 ವರ್ಷದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್​ ನೀಡಿ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಇದು ಮಾತ್ರವಲ್ಲದೇ ಈ ಅಶ್ಲೀಲ ದೃಶ್ಯದ ವಿಡಿಯೋವನ್ನೂ ಚಿತ್ರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ.

ಹಲ್ಲುನೋವಿನಿಂದ ಬಳಲುತ್ತಿದ್ದ ಸಂತ್ರಸ್ತೆ ಉತ್ತರ ಪ್ರದೇಶದ ಸೈದ್ಪುರ ಬಳಿ ಆಸ್ಪತ್ರೆಗೆ ಅಕ್ಟೋಬರ್​ 16ರಂದು ತೆರಳಿದ್ದರು. ಹಲ್ಲಿನ ಪರಿಶೀಲನೆ ನಡೆಸಿದ ವೈದ್ಯ ಹಲ್ಲು ಕೀಳಿಸಬೇಕು ಎಂದು ಹೇಳಿದ್ದಾನೆ.

ಇದಾಗಿ ಕೆಲ ದಿನಗಳ ಬಳಿಕ ಸಂತ್ರಸ್ತೆ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಈ ವೇಳೆ ಆಕೆಗೆ ಹಲ್ಲು ಕೀಳುವ ವೇಳೆ ನೋವಿನ ಅನುಭವವಾಗಬಾರದೆಂದು ಪ್ರಜ್ಞೆ ತಪ್ಪಿಸುವುದಾಗಿ ವೈದ್ಯ ಹೇಳಿದ್ದಾನೆ. ಆದರೆ ಹಲ್ಲು ಕಿತ್ತ ಬಳಿಕ ವೈದ್ಯ ಆಕೆಯ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮಹಿಳೆ ತಡವಾಗಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಪತಿಗೆ ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...