alex Certify ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಆತ್ಮಹತ್ಯೆ

Denied money for booze by mom, 44-year-old man jumps off balcony in Bhopal | Bhopal News - Times of India

ಭೋಪಾಲ್: ಮದ್ಯಪಾನ ಮಾಡಲು ಹಣ ಕೇಳಿದ್ದಕ್ಕೆ ತಾಯಿ ನಿರಾಕರಿಸಿದ್ದರಿಂದ 44 ವರ್ಷದ ವ್ಯಕ್ತಿ 3ನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿರುವ ಘಟನೆ ಅಯೋಧ್ಯಾ ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಆಟೋಚಾಲಕ ಶಿವನಗರ ನಿವಾಸಿ ಶ್ರೀವಾಸ್ತವ(44) ಎಂದು ಗುರುತಿಸಲಾಗಿದೆ. ತಾಯಿ ಹಾಗೂ ಹಿರಿಯ ಸಹೋದರನೊಂದಿಗೆ ಅಯೋಧ್ಯೆ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ. ಮದ್ಯಪಾನದ ಚಟಕ್ಕೆ ಬಿದ್ದ ಈತ ತಾಯಿ ಜತೆ ಹಣಕ್ಕಾಗಿ ಪೀಡಿಸಿದ್ದಾನೆ. ಅವರು ಹಣ ಕೊಡಲು ನಿರಾಕರಿಸಿದ್ದಕ್ಕೆ 3ನೇ ಮಹಡಿಯ ಬಾಲ್ಕನಿಯಿಂದ ಹಾರಿ ಕೆಳಗೆ ಬಿದ್ದಿದ್ದಾನೆ.

ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದ ಲೇಡಿ ಪೊಲೀಸ್

ಗಂಭೀರ ಗಾಯಗೊಂಡಿದ್ದ ಈತನನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಈ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಅಯೋಧ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...