alex Certify BIG BREAKING: ರಾಜ್ಯಕ್ಕೂ ವಕ್ಕರಿಸಿದ ʼಡೆಲ್ಟಾ ಪ್ಲಸ್ʼ​ ರೂಪಾಂತರಿ ವೈರಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯಕ್ಕೂ ವಕ್ಕರಿಸಿದ ʼಡೆಲ್ಟಾ ಪ್ಲಸ್ʼ​ ರೂಪಾಂತರಿ ವೈರಸ್​..!

ಕೊರೊನಾ 2ನೆ ಅಲೆಯ ವಿರುದ್ಧ ಹೋರಾಟ ಮುಂದುವರಿದಿರುವಾಗಲೇ ಡೆಲ್ಟಾ ವೈರಸ್​​ ಹೊಸ ರೂಪಾಂತರವನ್ನ ಪಡೆದುಕೊಂಡಿದ್ದು ಡೆಲ್ಟಾ ಪ್ಲಸ್​ ಅಥವಾ ಎವೈ. 1 ಆಗಿ ಬದಲಾಗಿತ್ತು. ಈ ವೈರಸ್​ ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ಸಂದೇಶ ನೀಡಿರುವ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಈ ಮಹಾಮಾರಿ ರೂಪಾಂತರಿ ಕಾಲಿಟ್ಟಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲಾ 1 ಡೆಲ್ಪಾ ಪ್ಲಸ್​ ರೂಪಾಂತರಿ ವೈರಸ್​ ಸೋಂಕು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್​ ಇದೀಗ ಕರ್ನಾಟಕ್ಕೂ ಕಾಲಿಟ್ಟಿರೋದು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಡೆಲ್ಟಾ ರೂಪಾಂತರವು ಭಾರತಕ್ಕೆ ಮೊದಲ ಬಾರಿಗೆ ಕಾಣಿಸಿಕೊಂಡ ಬಳಿಕವೇ ಎರಡನೇ ಅಲೆ ಅಷ್ಟೊಂದು ಭಯಾನಕವಾಗಲು ಕಾರಣವಾಗಿತ್ತು. ಇದೀಗ ಈ ಭಯಾನಕ ವೈರಸ್​ ಮತ್ತೊಂದು ರೂಪ ಪಡೆದಿರೋದು ಇನ್ಯಾವ ಅಪಾಯವನ್ನ ತಂದೊಡ್ಡಲಿದೆ ಎಂಬ ಭಯ ಶುರುವಾಗಿದೆ. ದೇಶದಲ್ಲಿ ಕೊರೊನಾ ವಿರುದ್ಧದ ಚಿಕಿತ್ಸೆಗೆ ಇತ್ತೀಚಿಗೆ ಬಳಕೆಯಾಗುತ್ತಿರುವ ಕಾಕ್​​ಟೈಲ್​ ಮೊನೊಕ್ಲೋನಲ್​ ಕೊರೊನಾ ವೈರಸ್​ ಡೆಲ್ಟಾ ಪ್ಲಸ್​ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...