alex Certify ಆಹಾರ ಆರ್ಡರ್‌ ಮಾಡಿ ಕಾಯ್ತಿದ್ದವ ಮೆಸೇಜ್​ ನೋಡಿ ಶಾಕ್….​! ಸಾರಿ ನಾನೇ ತಿಂದೆ ಎಂದ ಡೆಲಿವರಿ ಬಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಆರ್ಡರ್‌ ಮಾಡಿ ಕಾಯ್ತಿದ್ದವ ಮೆಸೇಜ್​ ನೋಡಿ ಶಾಕ್….​! ಸಾರಿ ನಾನೇ ತಿಂದೆ ಎಂದ ಡೆಲಿವರಿ ಬಾಯ್

ಆನ್​ಲೈನ್​ನಿಂದ ಆಹಾರ ಆರ್ಡರ್​ ಮಾಡಿ ಎಷ್ಟು ಹೊತ್ತಾದರೂ ಅದು ಬರದಿದ್ದರೆ ನಿಮಗೆ ಹೇಗಾಗಬೇಡ? ಆದರೂ ನಿಮ್ಮಿಷ್ಟದ ಆಹಾರ ಬರುತ್ತದೆ ಎಂದು ಸ್ವಲ್ಪ ಹೊತ್ತು ಪೇಷನ್ಸ್​ನಿಂದ ಕಾಯುತ್ತೀರಿ ಅಲ್ಲವೆ? ಇಲ್ಲೊಂದು ಘಟನೆಯಲ್ಲಿಯೂ ಆರ್ಡರ್​ ಮಾಡಿದ ಗ್ರಾಹಕ ತನ್ನ ಆಹಾರಕ್ಕಾಗಿ ಕಾದು ಕುಳಿತ. ಆದರೆ ಬಂದದ್ದು ಆಹಾರವಲ್ಲ, ಬದಲಿಗೆ ಆಹಾರ ನೀಡುವ ಡೆಲಿವರಿ ಬಾಯ್ ​ನ ಸಂದೇಶ!

ಅಷ್ಟಕ್ಕೂ ಈ ಸಂದೇಶ ಏನು ಅಂತೀರಾ? ನೀವು ಆರ್ಡರ್​ ಮಾಡಿದ್ದ ಫುಡ್​ ತುಂಬಾ ಟೇಸ್ಟಿಯಾಗಿತ್ತು ಎಂದು…! ಇದನ್ನು ನೋಡಿ ಗ್ರಾಹಕ ಕಕ್ಕಾಬಿಕ್ಕಿಯಾದ. ಮೊದಲಿಗೆ ಸಂದೇಶ ಕಳುಹಿಸಿದ್ದ ಡೆಲವರಿ ಬಾಯ್​, ಹೀಗೆ ನಾನು ಹೇಳುತ್ತಿದ್ದುದಕ್ಕೆ ಸಾರಿ. ನಿಮ್ಮ ಆಹಾರವನ್ನು ನಾನೇ ತಿಂದುಬಿಟ್ಟೆ. ತುಂಬಾ ಟೇಸ್ಟಿಯಾಗಿತ್ತು ಎಂದಿದ್ದಾನೆ. ಇದನ್ನು ಓದಿದ ಗ್ರಾಹಕ ಕಕ್ಕಾಬಿಕ್ಕಿಯಾಗಿದ್ದಾನೆ.

ಹೀಗೆ ಮೋಸ ಹೋದ ಗ್ರಾಹಕನಾಗಿರುವ ಲಿಯಾಮ್ ಬಾಗ್ನಾಲ್ ತಮ್ಮ ಟ್ವಿಟರ್‌ನಲ್ಲಿ ಈ ಸಂವಾದವನ್ನು ಶೇರ್​ ಮಾಡಿಕೊಂಡಿದ್ದಾರೆ. ಮೊದಲಿಗೆ ಸಾರಿ ಎಂದು ಆತ ಹೇಳಿದ್ದಾನೆ. ಲಿಯಾಮ್​ ಏಕೆ ಎಂದು ಪ್ರಶ್ನಿಸಿದಾಗ ನೀವು ಆರ್ಡರ್​ ಮಾಡಿದ್ದ ಆಹಾರವನ್ನು ನಾನೇ ತಿಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಇದಕ್ಕೆ ವಿಪರೀತ ಸಿಟ್ಟು ಮಾಡಿಕೊಂಡ ಲಿಯಾಮ್​ ನೀನೊಬ್ಬ ವಿಚಿತ್ರ ಮನುಷ್ಯ ಎಂದಿರುವುದು ಸಂಭಾಷಣೆಯಲ್ಲಿ ನೋಡಬಹುದು.

ಈ ಬಗ್ಗೆ ಕಂಪೆನಿಯಿಂದ ಪರಿಹಾರಕ್ಕಾಗಿ ಕೋರಿ ಲಿಯಾಮ್​ ದೂರು ಸಲ್ಲಿಸಿದ್ದಾರೆ. ಅದರಲ್ಲಿ ಈ ಸಂದೇಶದ ಸ್ಕ್ರೀನ್​ಷಾಟ್​ಗಳನ್ನು ಇಟ್ಟಿದ್ದಾರೆ.

— Bags (@BodyBagnall) October 28, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...