alex Certify ಕೇವಲ 8 ನಿಮಿಷದ ಕಾರ್ಯಾಚರಣೆ ಮೂಲಕ ಮಹಿಳೆಯ ಜೀವ ಕಾಪಾಡಿದ ಖಾಕಿ ಪಡೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 8 ನಿಮಿಷದ ಕಾರ್ಯಾಚರಣೆ ಮೂಲಕ ಮಹಿಳೆಯ ಜೀವ ಕಾಪಾಡಿದ ಖಾಕಿ ಪಡೆ..!

ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದ 25 ವರ್ಷದ ಮಹಿಳೆಯನ್ನು ಅತ್ಯಂತ ತ್ವರಿತ ಕಾರ್ಯಾಚರಣೆಯ ಮೂಲಕ ದೆಹಲಿ ಪೊಲೀಸರು ಪತ್ತೆ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. ಈ ಕಾರ್ಯಾಚರಣೆಯನ್ನು ನಡೆಸಲು ದೆಹಲಿ ಪೊಲೀಸರು 8 ನಿಮಿಷಗಳಿಗಿಂತಲೂ ಕಡಿಮೆ ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್​ಸ್ಟಾಗ್ರಾಂ ಲೈವ್​ ಮಾಡುತ್ತಲೇ ಸ್ಯಾನಿಟೈಸರ್​ ಸೇವನೆ ಮಾಡಿದ್ದ ಮಹಿಳೆಯು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದಳು. ಈಕೆ ತನ್ನ ಪತಿಯೊಂದಿಗೆ ವಾಸವಿದ್ದಳು.

ಈ ಪ್ರಕರಣದ ವಿಚಾರವಾಗಿ ಮಾತನಾಡಿದ ಡಿಸಿಪಿ ಸಾಗರ್​ ಸಿಂಗ್​ ಕಲ್ಸಿ ನಾವು ಸೈಬರ್​ ಸೆಲ್​ನಿಂದ ರಾತ್ರಿ 9:55ರ ಸುಮಾರಿಗೆ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿದ್ದೆವು. ಸೈಬರ್​ ಸೆಲ್​ ತಂಡ ನಮಗೆ ಈ ವಿಡಿಯೋ ಯಾವ ಏರಿಯಾದಿಂದ ಚಿತ್ರೀಕರಿಸಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತ್ತು.

ನಾವು ಕೂಡಲೇ ಸ್ಟೇಷನ್​ ಹೌಸ್​ ಆಫೀಸರ್​ ರಾಜೇಂದ್ರ ಪ್ರಸಾದ್​​​ರನ್ನು ಸಂಪರ್ಕಿಸಿದೆವು. ಹಾಗೂ ಆ ಏರಿಯಾದಲ್ಲಿದ್ದ ಮಹಿಳೆಗಾಗಿ ತಲಾಶ್​ ಆರಂಭವಾಯ್ತು. ಆಕೆಯ ಸರಿಯಾದ ವಿಳಾಸವನ್ನು ಪಡೆದುಕೊಳ್ಳಲು ಆಕೆಯನ್ನು ಫೋನ್​ ಮೂಲಕ ಸಂಪರ್ಕಿಸಲಾಗಿತ್ತು ಎಂದು ಹೇಳಿದರು.

10:02ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೂಡಲೇ ಆಕೆಯ ಪತಿ ಹಾಗೂ ಸಹೋದರನಿಗೆ ವಿಷಯ ಮುಟ್ಟಿಸಲಾಗಿದೆ. ವಿಚಾರಣೆಯ ವೇಳೆ ಆಕೆ ಜೀವನದಲ್ಲಿ ಜಿಗುಪ್ಸೆ ಬಂದು ಈ ರೀತಿ ಮಾಡಲು ಮುಂದಾಗಿದ್ದೆ ಎಂದು ಹೇಳಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...