alex Certify ಶಾಕಿಂಗ್..! ಬಸ್ ನಲ್ಲೇ ಮಹಿಳಾ ಪೊಲೀಸ್ ಮೈಮುಟ್ಟಿ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ಬಸ್ ನಲ್ಲೇ ಮಹಿಳಾ ಪೊಲೀಸ್ ಮೈಮುಟ್ಟಿ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡಿ ಪರಾರಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 29 ವರ್ಷದ ಮಹಿಳಾ ಕಾನ್ಸ್ಟೇಬಲ್ ಗೆ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿದೆ.

ಸಿಟಿ ಬಸ್ ನಲ್ಲಿ ಅಪರಿಚಿತನೊಬ್ಬ ಅನುಚಿತವಾಗಿ ಸ್ಪರ್ಶಿಸಿ ಹಲ್ಲೆ ಮಾಡಿರುವುದಾಗಿ ಮಹಿಳಾ ಕಾನ್ಸ್ಟೇಬಲ್ ದೂರು ನೀಡಿದ್ದಾರೆ. ಬುಧವಾರ ಮಧ್ಯಾಹ್ನ ಕೆಲಸಕ್ಕೆ ತೆರಳಲು ಮಹಿಳಾ ಕಾನ್ ಸ್ಟೇಬಲ್ ಕ್ಲಸ್ಟರ್ ಬಸ್ ಹತ್ತಿದ್ದಾರೆ. ಅಪರಿಚಿತನಾಗಿರುವ ಆರೋಪಿ ಮಹಿಳಾ ಪೊಲೀಸ್ ಹಿಂಬದಿ ನಿಂತಿದ್ದು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಈ ವೇಳೆ ಆತನನ್ನು ಪ್ರಶ್ನಿಸಿ ದೂರು ನೀಡುವುದಾಗಿ ಹೇಳಿದಾಗ ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬಸ್ ನಲ್ಲಿದ್ದ ಯಾರು ಕೂಡ ಮಹಿಳಾ ಪೊಲೀಸ್ ಗೆ ನೆರವಿಗೆ ಬಂದಿಲ್ಲ ಎಂದು ಹೇಳಲಾಗಿದೆ.

ಮಹಿಳಾ ಪೊಲೀಸ್ ಬೆನ್ನು ಮತ್ತು ಭುಜವನ್ನು ಮುಟ್ಟಿ ಆತ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳಾ ಪೊಲೀಸ್ ನಿರ್ಲಕ್ಷಿಸಿ ದೂರ ಸರಿದಿದ್ದಾರೆ. ಮುಂದೆಯೂ ಬಂದ ಆತ ಅನುಚಿತವಾಗಿ ಸ್ಪರ್ಶಿಸಿದ್ದು ಇದಕ್ಕೆ ಆಕ್ಷೇಪಿಸಿ ಮಹಿಳಾ ಪೊಲೀಸ್ ದೂರು ನೀಡುವುದಾಗಿ ಜೋರು ಮಾಡಿದ್ದಾರೆ. ಆಗ ಆರೋಪಿ ಹೆಲ್ಮೆಟ್ ನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಮಹಿಳಾ ಪೊಲೀಸ್ ಗೆ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...