alex Certify ತಂಗಿಯ ಮಾನ ಕಾಪಾಡಲು ಹೋದ ಬಾಲಕನನ್ನು ಇರಿದು ಕೊಂದ ಅಪ್ರಾಪ್ತರು: ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಗಿಯ ಮಾನ ಕಾಪಾಡಲು ಹೋದ ಬಾಲಕನನ್ನು ಇರಿದು ಕೊಂದ ಅಪ್ರಾಪ್ತರು: ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ನವದೆಹಲಿ: ಸಹೋದರಿಯ ಮಾನಭಂಗಕ್ಕೆ ಯತ್ನಿಸಿದ ಇಬ್ಬರು ಅಪ್ರಾಪ್ತರ ವಿರುದ್ಧ ಬಾಲಕ ಪ್ರತಿಭಟಿಸಿದ್ದರಿಂದ ಆತನನ್ನೇ ಅಪ್ತಾಪ್ರರು ಇರಿದು ಕೊಲೆ ಮಾಡಿರುವ ಭೀಕರ ಘಟನೆ ದೆಹಲಿಯ ಪಟೇಲ್ ನಗರದಲ್ಲಿ ನಡೆದಿದೆ.

17 ವರ್ಷದ ಬಾಲಕ ಮನೋಜ್ ಕುಮಾರ್ ನೇಗಿ ಪ್ರಾಣ ಕಳೆದುಕೊಂಡಿದ್ದಾನೆ. ಈತನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ. ಈ ಭೀಕರ ಹತ್ಯೆಯ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ.

ಇಬ್ಬರು ಆರೋಪಿಗಳು ಬಾಲಕನ ಮೇಲೆ ಹಲ್ಲೆ ನಡೆಸಿರುವುದು ಮತ್ತು ಒಬ್ಬನು ಚಾಕುವಿನಿಂದ ಹಲವು ಬಾರಿ ಇರಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇರಿದು ಅವರು ಅತ್ತ ಹೋಗುತ್ತಿದ್ದಂತೆಯೇ ಬಾಲಕ ಸಹಾಯಕ್ಕಾಗಿ ತನ್ನ ಫೋನ್ ಅನ್ನು ತೆಗೆಯುವುದನ್ನು ದೃಶ್ಯದಲ್ಲಿ ನೋಡಬಹುದಾಗಿದೆ. ಆದರೆ ಅದು ಸಾಧ್ಯವಾಗದೇ ಆತ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಅಣ್ಣ-ತಂಗಿ ಕಂಪ್ಯೂಟರ್ ತರಗತಿ ಮುಗಿಸಿ ಹಿಂತಿರುಗುತ್ತಿದ್ದಾಗ ಬಾಲಕರು ಆಕೆಯ ಮಾನಭಂಗಕ್ಕೆ ಯತ್ನಿಸಿದ್ದರು. ಅದನ್ನು ತಡೆಯಲು ಅಣ್ಣ ಮುಂದಾದಾಗ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...