alex Certify ಝೊಮಾಟೊ ಡೆಲಿವರಿ ಏಜೆಂಟ್​ ಗೆ ಆರತಿ ಎತ್ತಿದ ಗ್ರಾಹಕ ! ಕಾರಣವೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಝೊಮಾಟೊ ಡೆಲಿವರಿ ಏಜೆಂಟ್​ ಗೆ ಆರತಿ ಎತ್ತಿದ ಗ್ರಾಹಕ ! ಕಾರಣವೇನು ಗೊತ್ತಾ ?

ಪ್ರತಿಯೊಬ್ಬರೂ ಫುಡ್​ ಡೆಲಿವರಿ ಅಪ್ಲಿಕೇಷನ್​ಗಳ ಮೂಲಕ ಫುಡ್​ ಆರ್ಡರ್​ ಮಾಡುವುದರೊಂದಿಗೆ, ಕಾಯುವ ಸಮಯವನ್ನು ಗಮನಿಸುತ್ತಿರುತ್ತಾರೆ. ಮಹಾನಗರಗಳಲ್ಲಿ ಸಹಜವಾಗಿ ರಸ್ತೆಯ ದಟ್ಟಣೆಯು ಕಾಯುವಿಕೆಯನ್ನು ಹೆಚ್ಚು ಮಾಡುತ್ತದೆ.

ಇಲ್ಲೊಬ್ಬ ಗ್ರಾಹಕ ಮಹಾಶಯ, ತಾನು ಆರ್ಡರ್​ ಮಾಡಿದ್ದ ಫುಡ್​ ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದು ಫುಡ್​ ಡೆಲಿವರಿ ಪ್ರತಿನಿಧಿಗೆ ಆರತಿ ಎತ್ತಿದ್ದಾನೆ. ಈ ವಿಡಿಯೋ ವೈರಲ್​ ಆಗಿದೆ.

ದಸರಾದಲ್ಲಿ ಟ್ರಾಫಿಕ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಫುಡ್​ ಡೆಲಿವರಿ ಪ್ರತಿನಿಧಿ ಒಂದು ಗಂಟೆ ತಡವಾಗಿ ಗ್ರಾಹಕನ ವಿಳಾಸಕ್ಕೆ ತಲುಪಿದ್ದಾನೆ. ಈ ವೇಳೆ ರೋಸಿ ಹೋಗಿದ್ದ ಗ್ರಾಹಕ, ಚಲನಚಿತ್ರದ ಫೀಲಿಂಗ್​ನಲ್ಲಿ ಸ್ವಾಗತಿಸುತ್ತಿರುವುದನ್ನು ಕ್ಲಿಪ್​ ತೋರಿಸುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಲಾದ ಕ್ಲಿಪ್​ನಲ್ಲಿ ಆರ್ಡರ್​ನೊಂದಿಗೆ ಆಗಮಿಸುವ ಡೆಲಿವರಿ ಏಜೆಂಟ್​ನೊಂದಿಗೆ ಆರಂಭವಾಗುತ್ತದೆ. ಮನೆ ಬಾಗಿಲನ್ನು ತಲುಪಿದ ನಂತರ, ಆ ಗ್ರಾಹಕ ವಿಜಯಪಥ್​ ಚಲನಚಿತ್ರದ ಕುಮಾರ್​ ಸಾನು ಅವರ ಆಯಿಯೇ ಆಪ್ಕಾ ಇಂತಜಾರ್​ ತಾ ಹಾಡನ್ನು ಹಾಡಲು ಪ್ರಾರಂಭಿಸುತ್ತಾನೆ. ನಂತರ ಅವರು ಆಹಾರವನ್ನು ಸ್ವೀಕರಿಸುವ ಮೊದಲು ಡೆಲಿವರಿ ಬಾಯ್​ನ ಹಣೆಯ ಮೇಲೆ ತಿಲಕವನ್ನೂ ಇಟ್ಟರು.

ತಿಲಕ ಇಡಲು ಬಂದಾಗ ಹೆಲ್ಮೆಟ್​ ತೆಗೆದು ಅನಿರೀಕ್ಷಿತ ಸ್ವಾಗತದ ನಂತರ ಮುಖದಲ್ಲಿ ನಗುವಿನೊಂದಿಗೆ ಡೆಲಿವರಿ ಬಾಯ್​ ಕೂಡ ಕ್ರೀಡಾ ಮನೋಭಾವವನ್ನು ತೋರಿಸಿದ್ದಾರೆ. ಇನ್ನು ಒಂದು ಗಂಟೆಯಿಂದ ಕಾಯುತ್ತಿರುವಾಗ ದೆಹಲಿಯ ಟ್ರಾಫಿಕ್​ ಹೊರತಾಗಿಯೂ ಆರ್ಡರ್​ ಪಡೆಯಲಾಗುತ್ತಿದೆ. ಧನ್ಯವಾದ ಝೊಮಾಟೊ ಎಂದು ಪೋಸ್ಟ್​ನ ಶೀಷಿರ್ಕೆ ಇದೆ.

ನಗುವ ಎಮೋಜಿಗಳೊಂದಿಗೆ ಕಾಮೆಂಟ್​ ವಿಭಾಗವನ್ನು ತುಂಬಿದ ಇನ್​ಸ್ಟಾಗ್ರಾಮ್​ ಬಳಕೆದಾರರು, ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಈ ವಿಡಿಯೋ 4.6 ಮಿಲಿಯನ್​ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...