alex Certify ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ

ಭಾರೀ ಆಸೆಯಿಂದ ತನ್ನ ಮೊದಲ ಸ್ಕೂಟರ್‌ ಖರೀದಿಸಿದ ದೆಹಲಿಯ ಯುವತಿಯೊಬ್ಬರಿಗೆ ತಮ್ಮ ಸ್ಕೂಟರ್‌ಗೆ ಸಿಕ್ಕ ನೋಂದಣಿ ಸಂಖ್ಯೆ ಭಾರೀ ಮುಜುಗರಕ್ಕೆ ಈಡು ಮಾಡಿದೆ.

ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ ಸ್ಕೂಟಿಯೊಂದನ್ನು ಪಡೆದ ಹುಡುಗಿಯೊಬ್ಬಳಿಗೆ ’SEX’ ಸರಣಿಯ ಅಕ್ಷರಗಳಿಂದ ಆರಂಭಗೊಂಡ ನೋಂದಣಿ ಸಂಖ್ಯೆ ಸಿಕ್ಕಿರುವುದು ಭಾರೀ ಮುಜುಗರಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿದ ಹುಡುಗಿಯ ತಂದೆ ಆರ್‌ಟಿಓ ಕಚೇರೆ ಅಲೆದು, ಬಳಿಕ ವಾಹನದ ಡೀಲರ್‌ ಬಳಿ ತೆರಳಿದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ.

ಅರಣ್ಯ ಇಲಾಖೆ ಅಧಿಕಾರಿಯಿಂದ ಅತ್ಯಾಚಾರ, ಖಾಸಗಿ ಚಿತ್ರ ಬಹಿರಂಗಪಡಿಸುವ ಬೆದರಿಕೆ; ದೂರು

ಆದರೆ ಹುಡುಗಿಗೆ ಆಕೆಯ ವಾಹನದ ನೋಂದಣಿಯ ಸಂಖ್ಯೆಯನ್ನು ಕೆಟ್ಟ ಅಭಿರುಚಿಯಲ್ಲಿ ಅಣಕ ಮಾಡುತ್ತಿದ್ದ ಆಕೆಯ ಸ್ನೇಹಿತರು ಹಾಗೂ ಪರಿಚಿತರಿಂದ ಭಾರೀ ಹತಾಶೆಯಾಗಿ ದೆಹಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ದೆಹಲಿ ಮಹಿಳಾ ಆಯೋಗ ಸಾರಿಗೆ ಇಲಾಖೆಗೆ ನೋಟಿಸ್ ಕಳುಹಿಸಿದ್ದು, S, E, X ಎಂಬ ಅಕ್ಷರಗಳನ್ನು ತೆಗೆದು ಹಾಕಿ ಬೇರೆ ನೋಂದಣಿ ಸಂಖ್ಯೆ ನೀಡಲು ಹುಡುಗಿಯ ಪರವಾಗಿ ಕೋರಿದೆ.

ಈ ಕುರಿತು ಮಾತನಾಡಿದ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್, “ಈ ‘SEX’ ಸರಣಿಯಲ್ಲಿ ನೋಂದಣಿಯಾಗಿರುವ ವಾಹನಗಳ ಒಟ್ಟು ಸಂಖ್ಯೆಯನ್ನು ನೀಡಲು ಸಾರಿಗೆ ಇಲಾಖೆಯನ್ನು ಕೋರಿದ್ದೇನೆ. ಒಂದು ಹುಡುಗಿಗೆ ಈ ಮಟ್ಟದಲ್ಲಿ ಅವಮಾನ ಮಾಡುವ ಮಟ್ಟದಲ್ಲಿ ಜನರು ಇರುವುದು ದುರದೃಷ್ಟಕರ. ಹುಡುಗಿಗೆ ಇನ್ನಷ್ಟು ಮುಜುಗರ ಆಗದೇ ಇರಲಿ ಎಂದು ಸಾರಿಗೆ ಇಲಾಖೆಗೆ ನಾನು 4 ದಿನಗಳ ಕಾಲಾವಕಾಶ ನೀಡಿದ್ದೇನೆ,” ಎಂದು ಸ್ವಾತಿ ತಿಳಿಸಿದ್ದಾರೆ.

ದೆಹಲಿ ಆರ್‌ಟಿಓ ಕಚೇರಿಗಳಲ್ಲಿ ತಮ್ಮ ವಾಹನ ನೋಂದಣಿ ಮಾಡಿಸಿಕೊಳ್ಳಲು ಇಚ್ಛಿಸುವ ದ್ವಿಚಕ್ರ ವಾಹನಗಳ ಮಾಲೀಕರಿಗೆ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಸಮಸ್ಯೆಯೊಂದು ಕಾಣಿಸಿಕೊಂಡಿದೆ.

ಬರೋಬ್ಬರಿ 2 ವರ್ಷಗಳ ಅಂತರದಲ್ಲಿ ಈ ದ್ವೀಪದಲ್ಲಿ ದಾಖಲಾಗಿದೆ ಮೊದಲ ಕೊರೊನಾ ಪ್ರಕರಣ…!

ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ’S’ ಅಕ್ಷರದಿಂದ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ದೆಹಲಿಯಲ್ಲಿ ವಾಹನಗಳ ನೋಂದಣಿ ಸಂಖ್ಯಾ ಫಲಕದಲ್ಲಿ ‘DL’ನಿಂದ ಸಂಖ್ಯೆ ಆರಂಭವಾಗುತ್ತದೆ. ಇದಾದ ಬಳಿಕ ಜಿಲ್ಲೆಯ ಸೂಚಕ ಸಂಖ್ಯೆ, ಬಳಿಕ ವಾಹನದ ವಿಧದ ಆಧಾರದ ಮೇಲೆ ಅಕ್ಷರವೊಂದನ್ನು ನೀಡಲಾಗುತ್ತದೆ. ಇದಾದ ಮೇಲೆ ಇತ್ತೀಚಿನ ಸರಣಿಯನ್ನು ಸೂಚಿಸುವ ಎರಡು ಅಕ್ಷರಗಳು ಬರುತ್ತವೆ. ಇವೆಲ್ಲಾ ಆದ ಮೇಲೆ 4 ಅಂಕಿಯ ವಿಶಿಷ್ಟ ಸಂಖ್ಯೆಯ ಮೂಲಕ ವಾಹನದ ನೋಂದಣಿ ಸಂಖ್ಯೆ ಮುಕ್ತಾಯವಾಗುತ್ತದೆ.

ಉದಾಹರಣೆಗೆ: ವಾಹನ ನೋಂದಣಿ ಸಂಖ್ಯೆ ಹೀಗಿದ್ದರೆ – DL 2 C AD 1234 — DL ದೆಹಲಿಯನ್ನು ಸೂಚಿಸಿದರೆ, 2 ಪೂರ್ವ ದೆಹಲಿ ಜಿಲ್ಲೆ, C ಅಂದರೆ ಕಾರು ಅಥವಾ S ಅಂದರೆ ದ್ವಿಚಕ್ರ ವಾಹನಗಳು ಮತ್ತು AD ಆ ವಾಹನ ನೋಂದಣಿಯ ಸರಣಿಯನ್ನು ಸೂಚಿಸುತ್ತದೆ. ಇದಾದ ಬಳಿಕ ವಾಹನದ ಸಂಖ್ಯೆ ಬರುತ್ತದೆ.

ಹೀಗಾಗಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ‘S’ ಇರುತ್ತದೆ. ಹೀಗೆ ನೋಂದಣಿಯಾಗುತ್ತಾ ‘EX’ ಸರಣಿಯವರೆಗೂ ವಾಹನಗಳ ಸಂಖ್ಯೆ ಹಿಗ್ಗಿದೆ. ಯಾವುದೇ ಉದ್ದೇಶವಿಲ್ಲದೇ, ಹೀಗೊಂದು ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದ್ದು, ‘SEX’ಎಂಬ ಅಕ್ಷರಮಾಲೆ ದೆಹಲಿಯ ಕೆಲ ವಾಹನಗಳ ಸಂಖ್ಯಾಫಲಕಗಳ ಮೇಲೆ ರಾರಾಜಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...