alex Certify Viral Photo | ಮತ್ತೊಂದು ವಿವಾದದಲ್ಲಿ ವಿಜಯ್ ಗೋಯೆಲ್; ತಾಳ್ಮೆ ಕಳೆದುಕೊಂಡು ಯುವತಿಗೆ ಥಳಿಸಿದ್ರಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Photo | ಮತ್ತೊಂದು ವಿವಾದದಲ್ಲಿ ವಿಜಯ್ ಗೋಯೆಲ್; ತಾಳ್ಮೆ ಕಳೆದುಕೊಂಡು ಯುವತಿಗೆ ಥಳಿಸಿದ್ರಾ ?

ಬಿಜೆಪಿ ನಾಯಕ ವಿಜಯ್ ಗೋಯೆಲ್ ಯುವತಿಗೆ ಥಳಿಸಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಅವರು ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀದಿನಾಯಿಗಳ ಸಮಸ್ಯೆ ಬಗ್ಗೆ ಧ್ವನಿಯೆತ್ತಿರುವ ಅವರು ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮಾತುಗಳನ್ನ ಯುವತಿಯೊಬ್ಬರು ರೆಕಾರ್ಡ್ ಮಾಡುತ್ತಿದ್ದರು.

ನಾಯಿಗಳಿಗೆ ಆಹಾರ ನೀಡಬೇಡಿ ಎಂದು ವಿಜಯ್ ಗೋಯೆಲ್ ಜನರಿಗೆ ಹೇಳುತ್ತಿದ್ದಾಗ ಅದನ್ನ ವಿರೋಧಿಸಿ ಮಹಿಳೆಯೊಬ್ಬರು ಧ್ವನಿಯೆತ್ತುತ್ತಾರೆ. ಈ ವೇಳೆ ಗೋಯೆಲ್ ಅವರ ಪ್ರಶ್ನೆಗೆ ಉತ್ತರಿಸುವಾಗ ಜನರಿಗೆ ಸುಮ್ಮನಿರಿ ಎಂದು ಹೇಳುತ್ತಾರೆ. ಇದನ್ನ ಯುವತಿಯೊಬ್ಬರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿರುತ್ತಾರೆ.

ಈ ವೇಳೆ ನೀವು ಯಾಕೆ ರೆಕಾರ್ಡಿಂಗ್ ಮಾಡುತ್ತಿದ್ದೀರಿ? ಎಂದು ವಿಜಯ್ ಗೋಯೆಲ್ ಪ್ರಶ್ನಿಸುತ್ತಾರೆ. ಕೆಲ ಕಾಲ ಇಬ್ಬರ ನಡುವೆ ವಾಗ್ವಾದ ನಡೆದು ಯುವತಿಯಿಂದ ಮೊಬೈಲ್ ಕಸಿಯಲು ಪ್ರಯತ್ನಿಸುತ್ತಾರೆ. ಈ ವೇಳೆ ಯುವತಿಗೆ ಅವರು ಹೊಡೆದರಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಈ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...