alex Certify ಎರಡು ಲಕ್ಷ ರೂ. ನ ಮ್ಯಾಕ್ಸಿಯಲ್ಲಿ ಕಂಗೊಳಿಸಿದ ದೀಪಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಲಕ್ಷ ರೂ. ನ ಮ್ಯಾಕ್ಸಿಯಲ್ಲಿ ಕಂಗೊಳಿಸಿದ ದೀಪಿಕಾ

ತಮ್ಮ ಹೊಸ ಚಿತ್ರ ಗೆಹ್ರಿಯಾನ್‌ನ ಪ್ರಚಾರಕ್ಕೆ ಆಗಮಿಸಿದ್ದ ದೀಪಿಕಾ ಪಡುಕೋಣೆ ಸಮಾರಂಭಕ್ಕೆ ಆಕರ್ಷಕವಾದ ಕಪ್ಪು ಬಿಳುಪಿನ ಮ್ಯಾಕ್ಸಿ ಡ್ರೆಸ್‌‌ನಲ್ಲಿ ಆಗಮಿಸಿದ್ದರು. ಈ ಧಿರಿಸಿನ ಬೆಲೆ ಎರಡು ಲಕ್ಷ ರೂಪಾಯಿ ಎನ್ನಲಾಗಿದೆ.

ಫೆಬ್ರವರಿ 11ರಂದು ಓಟಿಟಿಯಲ್ಲಿ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿರುವ ʼಗೆಹ್ರಿಯಾನ್‌ʼನಲ್ಲಿ ದೀಪಿಕಾ ಜೊತೆಗೆ ಸಿದ್ಧಾಂತ್‌ ಚತುರ್ವೇದಿ, ಅನನ್ಯಾ ಪಾಂಡೆ ಹಾಗೂ ಧೈರ್ಯ ಕಾರ್ವಾ ಭಾರೀ ಸುದ್ದಿಯಲ್ಲಿದ್ದಾರೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್‌ ಕಾಣಿಸಿಕೊಂಡಿದ್ದಾರೆ.

ಇದೇ ಅಲ್ವ ಮಾನವೀಯತೆ……! ಬೀದಿ ನಾಯಿಗಳಿಗೆ ಹಸಿವು ನೀಗಿಸುವ ಹಿರಿಯ ವ್ಯಕ್ತಿ

ಮುಂಬಯಿಯ ಫೋರ್‌ ಸೀಸನ್ಸ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ದೀಪಿಕಾ ತಮ್ಮ ಈ ಉಡುಪಿನೊಂದಿಗೆ ನೋಡುಗರ ಕಣ್ಮನ ಸೆಳೆದಿದ್ದಾರೆ. ಅಲೆಕ್ಸ್‌ ಪೆರ‍್ರಿ ಕಲೆಕ್ಷನ್‌ ನ ಈ ಉಡುಪಿನ ಬೆಲೆ $3000 (2,23,942 ರೂ.ಗಳು).

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...