alex Certify ವರ್ಕ್‌ಔಟ್ ವೇಳೆ 80ರ ದಶಕದ ಹಾಡಿಗೆ ಹೆಜ್ಜೆ ಹಾಕಿದ ಹೃತಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಕ್‌ಔಟ್ ವೇಳೆ 80ರ ದಶಕದ ಹಾಡಿಗೆ ಹೆಜ್ಜೆ ಹಾಕಿದ ಹೃತಿಕ್

ಬಾಲಿವುಡ್‌ನ ಗ್ರೀಕ್ ಗಾಡ್ ಎಂದೇ ಖ್ಯಾತರಾದ ಹೃತಿಕ್ ರೋಷನ್ ಇತ್ತೀಚೆಗೆ ವರ್ಕ್‌ಔಟ್‌ ಮಾಡುವ ವೇಳೆ 1980ರ ಸ್ಟೈಲ್‌ಗೆ ಹೊರಳುತ್ತಿರುವ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ನವರಾತ್ರಿ ಸಂಭ್ರಮದ ಪ್ರಯುಕ್ತ ಗರ್ಬಾ ನೃತ್ಯ ಮಾಡುತ್ತಿರುವ ಹೃತಿಕ್‌ರನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ವರ್ಕ್ ಔಟ್‌ ಮಾಡಲು ತರಬೇತುದಾರ ಹೇಳಿದಾಗ ಹೃತಿಕ್‌ಗೆ ಹಿನ್ನೆಲೆಯಲ್ಲಿ ಬರುತ್ತಿದ್ದ ದನಿಯಿಂದ ಗಮನ ಅತ್ತ ಸರಿದಂತೆ ಕಾಣುತ್ತದೆ.

’ಬಾಲಿವುಡ್ ಹೀರೋ ಜಿಮ್‌ನಲ್ಲಿ ಇದ್ದಕ್ಕಿದ್ದಂತೆಯೇ 80ರ ದಶಕದ ಸಂಗೀತ ಆಲಿಸಿದಾಗ,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

BIG NEWS: ಯುವಕನನ್ನು ಭೀಕರವಾಗಿ ಕೊಲೆಗೈದು ಠಾಣೆಗೆ ಹೊತ್ತು ತಂದ ಕಿರಾತಕರು; ಶಾಕ್ ಆದ ಪೊಲೀಸರು

ವಿಡಿಯೋಗೆ ಕಮೆಂಟ್ ಮಾಡಿದ ದೀಪಿಕಾ ಪಡುಕೋಣೆ, ಹೃತಿಕ್‌ರನ್ನು ’ಮನರಂಜಕ’ ಎಂದು ಕರೆದಿದ್ದಾರೆ. ರಣವೀರ್‌ ಸಿಂಗ್, ಮತ್ತು ಕೃತಿ ಸನೋನ್ ಸಹ ಕಮೆಂಟ್ ಸೆಕ್ಷನ್‌ನಲ್ಲಿ ನಗುವ ಎಮೋಜಿ ಹಾಕಿದ್ದಾರೆ.

ಕ್ರಿಷ್‌ ಸರಣಿಯ ’ಕ್ರಿಷ್‌ 4’ ಚಿತ್ರಕ್ಕಾಗಿ ಹೃತಿಕ್ ಸಿದ್ಧರಾಗುತ್ತಿದ್ದಾರೆ. 2003ರಲ್ಲಿ ಬಿಡುಗಡೆಯಾದ ಕೋಯಿ ಮಿಲ್ ಗಯಾ ಚಿತ್ರದ ಮುಂದುವರೆದ ಭಾಗ ’ಕ್ರಿಷ್‌ 4’ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...