alex Certify ಶ್ರೀವಲ್ಲಿ ಹಾಡಿಗೆ ಡೇವಿಡ್ ವಾರ್ನರ್‌ ಸ್ಟೆಪ್; ಕಮೆಂಟ್‌ ಮಾಡಿದ ಅಲ್ಲು ಅರ್ಜುನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀವಲ್ಲಿ ಹಾಡಿಗೆ ಡೇವಿಡ್ ವಾರ್ನರ್‌ ಸ್ಟೆಪ್; ಕಮೆಂಟ್‌ ಮಾಡಿದ ಅಲ್ಲು ಅರ್ಜುನ್

ಐಪಿಎಲ್‌ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲು ಆರಂಭಿಸಿದಾಗಿನಿಂದ ಟಾಲಿವುಡ್‌ನ ದೊಡ್ಡ ಫಾಲೋವರ್‌ ಆಗಿಬಿಟ್ಟಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಡೇವಿಡ್ ವಾರ್ನರ್‌, ಆಗಾಗ ತೆಲುಗು ಚಿತ್ರಗಳ ಹಾಡುಗಳಿಗೆ ಸ್ಟೆಪ್ ಹಾಕುವ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ತಮ್ಮ ಲೇಟೆಸ್ಟ್ ಪೋಸ್ಟ್ ಒಂದರಲ್ಲಿ, ಅಲ್ಲು ಅರ್ಜುನ್‌ನ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಸ್ಟೆಪ್ ಒಂದನ್ನು ಅನುಕರಣೆ ಮಾಡಿದ್ದಾರೆ. ಭಾರೀ ಜನಪ್ರಿಯವಾಗಿರುವ ಈ ಸ್ಟೆಪ್ ಅನ್ನು ಎಲ್ಲೆಡೆ ಅನುಕರಣೆ ಮಾಡಿಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವ ಸಿನಿ ರಸಿಕರ ಬಳಗ ಸೇರಿಕೊಂಡಿದ್ದಾರೆ ಡೇವಿಡ್ ವಾರ್ನರ್‌.

BIG NEWS: ನೈಟ್ ಕರ್ಫ್ಯೂ, ನಿರ್ಬಂಧ ಮುಂದುವರಿಕೆ; ಏನಿರುತ್ತೆ..? ಏನಿರಲ್ಲ…?

ಚಪ್ಪಲಿ ಜಾರುವ ಸ್ಟೆಪ್‌ ಅನ್ನೂ ಸಹ ಅಲ್ಲು ಅರ್ಜುನ್‌ರಂತೆ ಮಾಡುವ ಡೇವಿಡ್ ವಾರ್ನರ್‌, ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು “ಪುಷ್ಪ ಮುಂದೇನು…?” ಎಂದು ತಮ್ಮ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ವಾರ್ನರ್‌‌ರ ಡ್ಯಾನ್ಸಿಂಗ್ ಕೌಶಲ್ಯ ಕಂಡು ಖುದ್ದು ಖುಷಿ ಪಟ್ಟ ಅಲ್ಲು ಅರ್ಜುನ್, ಒಂದಷ್ಟು ಎಮೋಜಿಗಳನ್ನು ಪೋಸ್ಟ್‌ನ ಕಾಮೆಂಟ್ ಸೆಕ್ಷನ್‌ನಲ್ಲಿ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...