alex Certify ಕಾರ್ ಟೈಯರ್ ಬ್ಲಾಸ್ಟ್ ಆಗಿ ಭೀಕರ ಅಪಘಾತ: ಆಸ್ಪತ್ರೆಯಲ್ಲಿದ್ದ ಸಂಬಂಧಿಕರಿಗೆ ಊಟ ಒಯ್ಯುತ್ತಿದ್ದ ಮಹಿಳೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಟೈಯರ್ ಬ್ಲಾಸ್ಟ್ ಆಗಿ ಭೀಕರ ಅಪಘಾತ: ಆಸ್ಪತ್ರೆಯಲ್ಲಿದ್ದ ಸಂಬಂಧಿಕರಿಗೆ ಊಟ ಒಯ್ಯುತ್ತಿದ್ದ ಮಹಿಳೆ ಸಾವು

ದಾವಣಗೆರೆ: ಕಾರ್ ನ ಟೈಯರ್ ಬ್ಲಾಸ್ಟ್ ಆಗಿ ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ. ದಾವಣಗೆರೆ ಎಸ್ಎಸ್ ಆಸ್ಪತ್ರೆ ಬಳಿ ಘಟನೆ ನಡೆದಿದೆ.

ಸ್ಕೂಟರ್ ನಲ್ಲಿದ್ದ ಶೋಭಾ(49) ಸಾವು ಕಂಡಿದ್ದು, ಕಾರ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯ ಎಸ್ಎಸ್ ಆಸ್ಪತ್ರೆಯಲ್ಲಿ ಮೃತ ಶೋಭಾ ಅವರ ಸಂಬಂಧಿಕರು ದಾಖಲಾಗಿದ್ದು, ಅವರಿಗೆ ಶೋಭಾ ಊಟ ತೆಗೆದುಕೊಂಡು ಹೋಗುತ್ತಿದ್ದರು. ಅಪಘಾತದಲ್ಲಿ ಮೂರು ಕಾರುಗಳು, ಸ್ಕೂಟಿ ಸಂಪೂರ್ಣ ಜಖಂಗೊಂಡಿವೆ. ದಾವಣಗೆರೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...