alex Certify ‘ಮಿಸ್ ತಮಿಳುನಾಡು’ ಪಟ್ಟ ಗೆದ್ದ ಕೂಲಿ ಕಾರ್ಮಿಕನ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಿಸ್ ತಮಿಳುನಾಡು’ ಪಟ್ಟ ಗೆದ್ದ ಕೂಲಿ ಕಾರ್ಮಿಕನ ಪುತ್ರಿ

ತಮಿಳುನಾಡಿನ ಚೆಂಗಲ್ಪೇಟ್ ಜಿಲ್ಲೆಯ ದಿನಗೂಲಿ ಪೋಷಕರ ಮಗಳು 20 ವರ್ಷದ ಯುವತಿ ಫಾರೆವರ್ ಸ್ಟಾರ್ ಇಂಡಿಯಾ ಅವಾರ್ಡ್ಸ್ ನಡೆಸಿದ ‘ಮಿಸ್ ತಮಿಳುನಾಡು’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಕ್ಷಯಾ ಎಂಬ ಯುವತಿ ಚೆಂಗಲ್ಪೇಟ್ ಜಿಲ್ಲೆಯ ತಿರುಕಲುಕುಂದ್ರಂನ ಕಟ್ಟಡ ಕಾರ್ಮಿಕ ಮನೋಹರ್ ಅವರ ಪುತ್ರಿ.

ಬಾಲ್ಯದ ಕನಸಿನಂತೆ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಗುರಿಯೊಂದಿಗೆ ರಕ್ಷಯಾ ತನ್ನ ಕಾಲೇಜು ಕೋರ್ಸ್ ಮುಗಿಸಿದ ನಂತರ ಅರೆಕಾಲಿಕ ಉದ್ಯೋಗಗಳನ್ನು ಮಾಡಿಕೊಂಡು ಸಿದ್ದತೆ ನಡೆಸಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಫಾರೆವರ್ ಸ್ಟಾರ್ ಇಂಡಿಯಾ ಅವಾರ್ಡ್ಸ್ ನಡೆಸಿದ ಜಿಲ್ಲಾ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಕೆಯನ್ನು ಆಯ್ಕೆ ಮಾಡಲಾಯಿತು. ನಂತರ ರಕ್ಷಯಾ ಎಲ್ಲರನ್ನೂ ಸೋಲಿಸಿದ್ದು ಮಿಸ್ ತಮಿಳುನಾಡು ಎಂದು ಘೋಷಿಸಲಾಯಿತು.

ಈ ವರ್ಷ ಡಿಸೆಂಬರ್ ನಲ್ಲಿ ನಡೆಯಲಿರುವ ‘ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಲಿದ್ದಾರೆ. ‘ಮಿಸ್ ತಮಿಳುನಾಡು’ ರಕ್ಷಯಾ ಅವರು ‘ಮಿಸ್ ಇಂಡಿಯಾ’ ಕಿರೀಟವನ್ನು ಮನೆಗೆ ತೆಗೆದುಕೊಂಡು ಹೋಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಮಗಳು ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಳು ಮತ್ತು ಕಾರ್ಯಕ್ರಮಮವೊಂದಕ್ಕೆ ನಿರೂಪಕಿಯಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದಾಗ ಬೆಂಬಲಿಸಿದ್ದೆವು ಎಂದು ರಕ್ಷಯಾ ಪೋಷಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...