alex Certify ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾನೆಂದು ಜಾಹೀರಾತು ನೀಡಿದ ಸೊಸೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾನೆಂದು ಜಾಹೀರಾತು ನೀಡಿದ ಸೊಸೆ..!

ಸೊಸೆಯೊಬ್ಬಳು ತನ್ನ ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾರೆ ಎಂದು ಹಾಕಿದ ಜಾಹೀರಾತೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಹೌದು..! ಅಮೆರಿಕದ ನಿವಾಸಿಯಾದ ಸೊಸೆಯೊಬ್ಬರು ತನ್ನ ಅತ್ತೆಗಾಗಿ 40- 60 ವರ್ಷ ಪ್ರಾಯದ ಬಾಯ್​ಫ್ರೆಂಡ್​ನ ಹುಡುಕಾಟದಲ್ಲಿದ್ದಾರೆ. ಈ ಜಾಹೀರಾತಿನಲ್ಲಿ 2 ದಿನಗಳ ಗುತ್ತಿಗೆ ಕೆಲಸ ಎಂದು ಉಲ್ಲೇಖಿಸಲಾಗಿದೆ.

ಸೋಶಿಯಲ್​ ಮೀಡಿಯಾದ ವೆಬ್​ಸೈಟ್​ ಒಂದರಲ್ಲಿ ಹಾಕಲಾದ ಜಾಹೀರಾತು ಇದೀಗ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಇದೊಂದು 2ದಿನಗಳ ಗುತ್ತಿಗೆ ಆಧಾರಿತ ಕೆಲಸವಾಗಿದ್ದು ಬಾಯ್​ಫ್ರೆಂಡ್​ ಆಗಲು ಆಯ್ಕೆಯಾದ ವ್ಯಕ್ತಿಗೆ 72000 ರೂಪಾಯಿ ನೀಡಲಾಗುವುದು ಎಂದು ಬರೆಯಲಾಗಿದೆ.

ನ್ಯೂಯಾರ್ಕ್​ನ ಹುಡ್ಸನ್​ ನಿವಾಸಿಯಾದ ಮಹಿಳೆಯು ತನ್ನ 51 ವರ್ಷ ಪ್ರಾಯದ ಅತ್ತೆಗೆ ಬಾಯ್​ಫ್ರೆಂಡ್​ ಬೇಕೆಂದು ಜಾಹೀರಾತನ್ನ ನೀಡಿದ್ದಾರೆ. ಬಾಯ್​ಫ್ರೆಂಡ್​ ಆಗಬಯಸುವ ವ್ಯಕ್ತಿಗೆ ನೃತ್ಯ ಮಾಡಲು ತಿಳಿದಿರಬೇಕು ಹಾಗೂ ಆತ ಉತ್ತಮ ಸಂಭಾಷಣೆ ನಡೆಸುವವನಾಗಿರಬೇಕು. ಸ್ನೇಹಿತರೊಬ್ಬರ ಮದುವೆಗೆ ತೆರಳುವ ಸಲುವಾಗಿ ಈ ಬಾಯ್​ಫ್ರೆಂಡ್​ ನೇಮಕ ಮಾಡಿಕೊಳ್ಳಲಾಗ್ತಿದೆ ಎಂತಲೂ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.

2 ದಿನಗಳ ಈ ಹುದ್ದೆಗೆ 1000 ಡಾಲರ್​ ಹಣ ಸಂಭಾವನೆ ರೂಪದಲ್ಲಿ ಸಿಗಲಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಜಾಹೀರಾತು ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಇದು ಸೋಶಿಯಲ್​ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರ ಎಂದು ಜರಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...