alex Certify ಕುಡುಕ ಪತಿಯ ಅಟ್ಟಹಾಸ; ಪತ್ನಿಯ ಕಣ್ಣನ್ನೇ ಕಚ್ಚಿ ವಿಕೃತಿ ಮೆರೆದ ದುರುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡುಕ ಪತಿಯ ಅಟ್ಟಹಾಸ; ಪತ್ನಿಯ ಕಣ್ಣನ್ನೇ ಕಚ್ಚಿ ವಿಕೃತಿ ಮೆರೆದ ದುರುಳ

ಮಂಗಳೂರು: ಕುಡುಕನೊಬ್ಬ ತನ್ನ ಪತ್ನಿಯ ಕಣ್ಣನ್ನು ಕಚ್ಚಿ ಕಣ್ಣುಗುಡ್ಡೆ ಹೊರಬರುವಂತೆ ಚಿತ್ರಹಿಂಸೆ ನೀಡಿರುವ ಘೋರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ.

ಮೋಹಿನಿ ಎಂಬ ಮಹಿಳೆ ಪತಿಯ ಹಿಂಸೆಗೆ ಗಂಭೀರವಾಗಿ ಗಾಯಗೊಂಡಿದ್ದು, ಉಜಿರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 55 ವರ್ಷದ ಸುರೇಶ್ ಗೌಡ ಎಂಬಾತ ಕಂಠಪೂರ್ತಿ ಕುಡಿದು ಬಂದು ಪತ್ನಿಗೆ ಹಿಂಸಿಸಿದ್ದು, ಆಕೆಯ ಕಣ್ಣನ್ನು ಕಚ್ಚಿ ಕಣ್ಣುಗುಡ್ಡೆ ಹೊರಬರುವಂತೆ ವಿಕೃತಿ ಮೆರೆದಿದ್ದಾನೆ. ಬಿಡಿಸಲು ಬಂದ ಮಗಳ ಮೇಲೂ ಹಲ್ಲೆ ಮಾಡಿದ್ದಾನೆ.

ಗಾಯಾಳುಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುರೇಶ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...