alex Certify BREAKING NEWS: ದಕ್ಷಿಣ ಕನ್ನಡ-ಕೊಡಗು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ; ಅಂಗಡಿಯೊಂದರ ಬಳಿ ಕಾಣಿಸಿಕೊಂಡ 8 ಜನ ನಕ್ಸಲರ ಗ್ಯಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ದಕ್ಷಿಣ ಕನ್ನಡ-ಕೊಡಗು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ; ಅಂಗಡಿಯೊಂದರ ಬಳಿ ಕಾಣಿಸಿಕೊಂಡ 8 ಜನ ನಕ್ಸಲರ ಗ್ಯಾಂಗ್

ಮಂಗಳೂರು: ದಕ್ಷಿಣ ಕನ್ನಡ-ಕೊಡಗು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ.

ಇಲ್ಲಿನ ಅಂಗಡಿಯೊಂದರ ಬಳಿ 8 ಜನ ನಕ್ಸಲರ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಕಾಡಂಚಿನ ಅಂಗಡಿಗೆ ತೆರಳಿ ದಿನಸಿ ಖರೀದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಪೊಲೀಸರು ನಕ್ಸಲರಿಗಾಗಿ ಶೋಧ ನಡೆಸಿದ್ದಾರೆ.

ಕೊಡಗು ಹಾಗೂ ದಕ್ಷಿಣ ಕನ್ನಡ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಕೂಜಿಮಲೆ, ಕಲ್ಮಕಾರ್ ಗೆ ನಕ್ಸಲ್ ನಿಗ್ರಹ ಪಡೆ ಕೂಡ ಭೇಟಿ ನೀಡಿದೆ. 5 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರು ಮತ್ತೆ ಪ್ರತ್ಯಕ್ಷರಾಗಿದ್ದು ಆತಂಕಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...