alex Certify 31 ಬಾರಿ ಚುನಾವಣೆ ಸೋತರೂ ನಿಲ್ಲದ ಉತ್ಸಾಹ; 32ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾದ ವೃದ್ಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

31 ಬಾರಿ ಚುನಾವಣೆ ಸೋತರೂ ನಿಲ್ಲದ ಉತ್ಸಾಹ; 32ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾದ ವೃದ್ಧ…!

ಸೋಲು, ಗೆಲುವಿಗೆ ಮೊದಲನೇ ಮೆಟ್ಟಿಲು ಅಂತಾರೆ. ಇಲ್ಲೊಬ್ಬ ವೃದ್ಧ ಈ ಮಾತನ್ನು ಸಿಕ್ಕಾಪಟ್ಟೆ ಗಂಭೀರವಾಗಿ ತೆಗೆದುಕೊಂಡಂತೆ ಕಾಣ್ತಿದೆ. 30ಕ್ಕೂ ಅಧಿಕ ಬಾರಿ ಚುನಾವಣೆಯಲ್ಲಿ ಸೋತ ಬಳಿಕವೂ 78 ವರ್ಷದ ಟೀತಾರ್​ ಸಿಂಗ್​ ಈ ವರ್ಷ ರಾಜಸ್ಥಾನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗ್ರಾಮ ಪಂಚಾಯತ್​ನಿಂದ ಹಿಡಿದು ಲೋಕಸಭಾ ಚುನಾವಣೆವರೆಗೆ 1970ರ ದಶಕದಿಂದ ಈವರೆಗೆ ಟೀತಾರ್​ ಸಿಂಗ್​ 31 ಚುನಾವಣೆಗಳನ್ನು ಎದುರಿಸಿದ್ದಾರೆ. ಒಂದು ಬಾರಿಯೂ ಟೀತಾರ್​ ಸಿಂಗ್​ ಚುನಾವಣೆಯಲ್ಲಿ ಗೆಲುವನ್ನು ಕಂಡಿಲ್ಲ. ಆದರೆ ಜನರ ಹಕ್ಕುಗಳಿಗಾಗಿ ನಾನು ಹೋರಾಡಬೇಕು ಎಂಬ ಉತ್ಸಾಹದಿಂದ ಟೀತಾರ್ ಸಿಂಗ್​ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೇ ಚುನಾವಣೆಗಳಿಗೆ ಸ್ಪರ್ಧಿಸುತ್ತಲೇ ಇದ್ದಾರೆ.

ರಾಜಸ್ಥಾನದ ಕರಣಪುರ ವಿಧಾನಸಭಾ ಕ್ಷೇತ್ರದಿಂದ ತೀತರ್​ ಸಿಂಗ್​ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಟೀತಾರ್​ ಸಿಂಗ್​ ಪೂರ್ಣಗೊಳಿಸಿದ್ದಾರೆ. ನಾನು 32ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಅಂತಾ ಟೀತಾರ್​ ಸಿಂಗ್​ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇಲ್ಲಿಯವರೆಗೆ 31 ಚುನಾವಣೆಗಳಲ್ಲಿ ಸೋತಿರುವ ನಿಮಗೆ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಬೇಕು ಅಂತಾ ಏಕೆ ಎನಿಸಿತು ಎಂದು ಪ್ರಶ್ನಿಸಿದ್ರೆ ನಾನೇಕೆ ಹೋರಾಡಬಾರದು ಅಂತಾ ಟೀತಾರ್​ ಸಿಂಗ್​ ಮರುಪ್ರಶ್ನೆ ಮಾಡ್ತಾರೆ. ನಾನು ಜನಪ್ರಿಯತೆ ಗಳಿಸಲೋ ಅಥವಾ ದಾಖಲೆಗಳಿಗಾಗಿ ಚುನಾವಣೆಗಳಿಗೆ ಸ್ಪರ್ಧಿಸುತ್ತಿಲ್ಲ. ಚುನಾವಣೆ ಅನ್ನೋದು ಹೋರಾಟ ಇದ್ದಂತೆ. ನಾನು ಜನರಿಗಾಗಿ ಕೊನೆವರೆಗೂ ಹೋರಾಡುತ್ತೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...