ದೇಶದಲ್ಲಿ ಕಳೆದ 66 ದಿನಗಳಲ್ಲೇ, ದಿನವೊಂದರಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ಪಾಸಿಟಿವ್ ಕೇಸುಗಳು ದಾಖಲಾಗಿವೆ.
ಸೋಮವಾರದಂದು 86,498 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಮೊದಲ ಬಾರಿಗೆ ಈ ಸಂಖ್ಯೆ ಲಕ್ಷದೊಳಗೆ ಬಂದಿದೆ. ಇದೇ ವೇಳೆ ಚೇತರಿಸಿಕೊಳ್ಳುತ್ತಿರುವವರ ಸೋಂಕಿತರ ಪ್ರಮಾಣವು 94.29 ಪ್ರತಿಶತ ತಲುಪಿದೆ.
ಇದೇ ವೇಳೆ, ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆಯು 13,03,702ಕ್ಕೆ ಇಳಿದಿದ್ದು, ಕಳೆದ 24 ಗಂಟೆಗಳಲ್ಲಿ 97,907ರಷ್ಟು ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1.82 ಲಕ್ಷ ಸೋಂಕಿತರು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ, ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆಯು 2,73,41,462ಕ್ಕೆ ಏರಿಕೆಯಾಗಿದೆ.
ಪ್ರಮಾಣವಚನ ಸ್ವೀಕರಿಸಲು ತಡವಾಗಿ ಬಂದ ಶಾಸಕರು; ಈಗಲೇ ಹೀಗೆ ಅಧಿವೇಶನದ ವೇಳೆ ಏನು ಮಾಡುತ್ತೀರಿ ಎಂದು ಸ್ಪೀಕರ್ ಗರಂ
ಗಮನಾರ್ಹವಾಗಿ; ಹೊಸದಾಗಿ ಸೋಂಕಿತರಾದವರಿಗಿಂತ ಚೇತರಿಸಿಕೊಂಡವರ ಸಂಖ್ಯೆಯು ಸತತ 26ನೇ ದಿನ ಹೆಚ್ಚಾಗಿದೆ. ಪರೀಕ್ಷೆಗೊಳಪಟ್ಟವರ ಪೈಕಿ ಪ್ರತಿನಿತ್ಯ ಸರಾಸರಿ 4.62% ಮಂದಿ ಪಾಸಿಟಿವ್ ಕಂಡುಬಂದಿದ್ದಾರೆ. ಸತತ 15 ದಿನಗಳ ಮಟ್ಟಿಗೆ ಈ ಪ್ರಮಾಣವು 10%ಗಿಂತ ಕಡಿಮೆಯಾಗಿದೆ.
ಕ್ರಿಕೆಟ್: ಫಾಲೋ-ಆನ್ ಮತ್ತು ಡಿಆರ್‌ಎಸ್ ನಿಯಮದಲ್ಲಿ ಮಹತ್ವದ ಮಾರ್ಪಾಡು
ಕಳೆದ 24 ಗಂಟೆಗಳ ಅವಧಿಯಲ್ಲಿ 2,123 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಈ ಮೂಲಕ ಕೋವಿಡ್ ಮೃತರ ಸಂಖ್ಯೆ 3,51,309ಕ್ಕೆ ಏರಿದೆ.
ಪರೀಕ್ಷಾ ಸಾಮರ್ಥ್ಯದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಕಳೆದ 24 ಗಂಟೆಗಳಲ್ಲಿ ಒಟ್ಟಾರೆ 18,73,485 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.