alex Certify ಸ್ಮಾರ್ಟ್​ ಫೋನ್​ ಗ್ರಾಹಕರೇ ಎಚ್ಚರ…! ನಿಮ್ಮ ಫೋನ್​ಗೆ ತಗುಲಬಹುದು ‘Daam’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್​ ಫೋನ್​ ಗ್ರಾಹಕರೇ ಎಚ್ಚರ…! ನಿಮ್ಮ ಫೋನ್​ಗೆ ತಗುಲಬಹುದು ‘Daam’

ಸ್ಮಾರ್ಟ್​ಫೋನ್​ ಗ್ರಾಹಕರೇ ಎಚ್ಚರ. “ಡಾಮ್” ಎಂಬ ಆಂಡ್ರಾಯ್ಡ್ ವೈರಸ್​ ಅತಿ ವೇಗದಲ್ಲಿ ಹರಡುತ್ತಿರುವುದು ವರದಿಯಾಗಿದೆ. ಇದು ಸೂಕ್ಷ್ಮ ಡೇಟಾವನ್ನು ಕದಿಯಲು, ಆಂಟಿವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ ಎಚ್ಚರಿಕೆ ನೀಡಿದೆ.

ಯಾವುದಾದರೂ ಅನಧಿಕೃತ ವೆಬ್‌ಸೈಟ್‌ಗಳು ಅಥವಾ ವಿಶ್ವಾಸಾರ್ಹವಲ್ಲದ/ಅಜ್ಞಾತ ಮೂಲಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳ ಮೂಲಕ ಆಂಡ್ರಾಯ್ಡ್ ಫೋನ್​ಗಳಿಗೆ ಈ ವೈರಸ್​ ಹರಡುತ್ತಿದೆ. ಸೈಬರ್ ದಾಳಿ ಎದುರಿಸಲು ಮತ್ತು ಫಿಶಿಂಗ್, ಹ್ಯಾಕಿಂಗ್ ಆಕ್ರಮಣಗಳಿಗೆ ಈ ವೈರಸ್​ ಸಹಕಾರಿಯಾಗಲಿದೆ.

ಕರೆ ರೆಕಾರ್ಡಿಂಗ್, ಸಂಪರ್ಕಗಳನ್ನು ಹ್ಯಾಕ್ ಮಾಡುವುದು, ಕ್ಯಾಮೆರಾಗೆ ಪ್ರವೇಶವನ್ನು ಪಡೆಯುವುದು, ಸಾಧನವನ್ನು ಮಾರ್ಪಡಿಸುವ ಸಾಮರ್ಥ್ಯವನ್ನು ಈ ವೈರಸ್​ ಹೊಂದಿದೆ. ಪಾಸ್‌ವರ್ಡ್‌ಗಳು, ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯುವುದು, SMS ಕದಿಯುವುದು, ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು/ಅಪ್‌ಲೋಡ್ ಮಾಡುವುದನ್ನು ಕೂಡ ಈ ವೈರಸ್​ ಮಾಡಲಿದೆ ಎನ್ನಲಾಗಿದೆ. ಆದ್ದರಿಂದ ಯಾವುದಾದರೂ ಫೈಲ್​, ವೆಬ್​ಸೈಟ್​ಗಳಿಂದ ಡೌನ್​ಲೋಡ್​ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...